ಉಳ್ಳಾಲ, ಫೆ. 15: ವಿಶ್ವಹಿಂದೂ ಪರಿಷತ್ ಸುವರ್ಣ ಮಹೋತ್ಸವದ ಅಂಗವಾಗಿ ಮಾ 1ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಭಾನುವಾರ ಅಸೈಗೋಳಿಯಿಂದ ಕುತ್ತಾರುವರೆಗೆ ಬೈಕ್ ರ‌್ಯಾಲಿ ನಡೆಯಿತು.


ಅಸೈಗೋಳಿಯಿಂದ ದೇರಳಕಟ್ಟೆ , ಕುಂಪಲ, ಕೋಟೆಕಾರು ಬೀರಿ, ಮಾಡೂರು, ಸೋಮೇಶ್ವರ , ತೊಕ್ಕೊಟ್ಟು , ಉಳ್ಳಾಲ ಮಾರ್ಗವಾಗಿ ಕುತ್ತಾರು ಶ್ರೀ ಸಿದ್ಧಿವಿನಾಯಕ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಮಾಪನಗೊಂಡಿತು.



ಬೈಕ್ ರ್ಯಾಲಿಗೆ ವಿಶ್ವಹಿಂದೂ ಪರಿಷತ್ ಮಾಜಿ ಕಾರ್ಯದರ್ಶಿ ಹಾಗೂ ನಿವೃತ್ತ ಅಧ್ಯಾಪಕ ವೆಂಕಪ್ಪ ಮಾಸ್ಟರ್ ಅಸೈಗೋಳಿ ಚಾಲನೆ ನೀಡಿದರು. ಹಿರಿಯರಾದ ಟಿ. ಅಂಬು, ವಿಶ್ವಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಗೋಪಾಲ ಕುತ್ತಾರ್, ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಪ್ರವೀಣ್ ಕುತ್ತಾರ್, ಪ್ರಖಂಡ ಸಂಚಾಲಕ ರವಿ ಅಸೈಗೋಳಿ, ಬಜೆಪಿ ಕೊಣಾಜೆ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ರೈ ಕ್ಕೆಮಜಲು, ವಿಶ್ವಹಿಂದೂ ಪರಿಷತ್ನ ಪ್ರಖಂಡ ಕಾರ್ಯದರ್ಶಿ ಬಿ.ನಾರಾಯಣ ಕುಂಪಲ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ರ‌್ಯಾಲಿ ಭಾಗವಹಿಸಿದರು.