ಉಳ್ಳಾಲ: ಗೋಣಿಚೀಲಗಳಲ್ಲಿ ಇರಿಸಲಾಗಿದ್ದ ಸುಲಿದ ಅಡಿಕೆಯನ್ನು ಕಳ್ಳರು ಕಳವುಗೈದಿರುವ ಘಟನೆ ಪಜೀರು ಗ್ರಾಮದ ಪಾನೇಲ ಬಾಕೀಮಾರ್ ಎಂಬಲ್ಲಿ ನಡೆದಿದೆ.
ಅಬ್ದುಲ್ ರವೂಫ್ ಎಂಬವರಿಗೆ ಸೇರಿದ , 8 ಗೋಣಿ ಚೀಲಗಳಲ್ಲಿ ಇರಿಸಲಾಗಿದ್ದ ಅಡಿಕೆ ಕಳವಾಗಿದೆ. ನಾಲ್ಕು ಕ್ವಿಂಟಾಲ್ ತೂಕವುಳ್ಳ ಅಡಿಕೆಯ ಅಂದಾಜು ಮೌಲ್ಯ ರೂ. 80,000 ಆಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.