
ಮುನ್ನೂರು : 2024ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪಡೆದ ಮುನ್ನೂರು ಯುವಕ ಮಂಡಲಕ್ಕೆ ಮುನ್ನೂರು ಗ್ರಾಮ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಕಳೆದ 54 ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಾ ಬಂದ ಮುನ್ನೂರು ಯುವಕ ಮಂಡಲ ಕುತ್ತಾರ್ ಮುನ್ನೂರು ಸೌಹಾರ್ದಯುತವಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡು ಜನರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಕಲ್ಪಿಸುತ್ತಾ ಬಂದಿದೆ. ಇವರ ಹಲವು ವರ್ಷಗಳ ಸೇವೆಯನ್ನು ಮನಗಂಡು ನ.1 ಕ್ಕೆ ಜಿಲ್ಲಾ ಪ್ರಶಸ್ತಿಯನ್ನು ಜಿಲ್ಲಾಡಳಿತ ನೀಡಿ ಗೌರವಿಸಿದೆ . ಈ ಹಿನ್ನೆಲೆಯಲ್ಲಿ ಗ್ರಾಮಾಡಳಿತದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷರಾದ ಮಹಾಬಲ್. ಟಿ. ದೆಪ್ಪೆಲಿಮಾರ್, ಮುನ್ನೂರು ಯುವಕ ಮಂಡಲ ಸ್ಥಾಪಕ ಸದಸ್ಯರು ಗಳಾದ ವಿಶ್ವನಾಥ್ ತೇವುಲ. ಕೆ ಕೃಷ್ಣಪ್ಪ ಸಾಲಿಯಾನ್ , ಮುನ್ನೂರು ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಮುಂಡೋಳಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿ ವರ್ಗ ಪಂಚಾಯತ್ ಸದಸ್ಯರುಗಳು ಯುವಕ ಮಂಡಲ ಸದಸ್ಯರು ಉಪಸ್ಥಿತರಿದ್ದರು.