
ತೊಕ್ಕೊಟ್ಟು: ಮಕ್ಕಳಿಗಾಗಿ ಉನ್ನತ ಮಟ್ಟದ ಶಿಕ್ಷಣ ನೀಡಲು ಯೋಜಿಸಿರುವ ಲಿಟ್ಲ್ ಬನ್ನೀಸ್ ಪ್ರೀ ಪ್ರೈಮರಿ ಸ್ಕೂಲ್ ತೊಕ್ಕೊಟ್ಟು ಕಾಪಿಕಾಡುವಿನಲ್ಲಿ ಶೀಘ್ರವೇ ಶುಭಾರಂಭಗೊಳ್ಳಲಿದೆ. ಈ ಸಂಸ್ಥೆ ಡೆ ಕೇರ್, ನರ್ಸರಿ, ಎಲ್ ಕೆಜಿ ಮತ್ತು ಯು ಕೆಜಿ ತರಗತಿಗಳನ್ನು ಒಳಗೊಂಡಿದ್ದು, ಮಕ್ಕಳ ಸಂಪೂರ್ಣ ಬೌದ್ಧಿಕ ಹಾಗೂ ಸೃಜನಾತ್ಮಕ ಬೆಳವಣಿಗೆಗೆ ಸೂಕ್ತ ವಾತಾವರಣ ಒದಗಿಸಲಿದೆ.
ಮಾತೃಭಾಷೆ ಹಾಗೂ ಇಂಗ್ಲೀಷ್ ಪ್ರಾಧಾನ್ಯತೆ, ಆಟ-ಪಾಠದ ಸಮನ್ವಯ, ನವೀನ ಶೈಕ್ಷಣಿಕ ವಿಧಾನಗಳು, ಅನುಭವೀ ಶಿಕ್ಷಕ ವೃಂದ ಮತ್ತು ಮಕ್ಕಳ ಮನೋವಿಜ್ಞಾನಕ್ಕೆ ತಕ್ಕ ಶೈಕ್ಷಣಿಕ ಮಾದರಿಗಳನ್ನು ಈ ಸಂಸ್ಥೆ ಅನುಸರಿಸಲಿದೆ. ವಿಶೇಷವಾಗಿ, ಮೊಂಟೆಸ್ಸರಿ ಟೀಚರ್ ಟ್ರೈನಿಂಗ್ ನೀಡುವ ವ್ಯವಸ್ಥೆಯೂ ಇಲ್ಲಿ ದೊರೆಯಲಿದೆ, ಇದು ಶಿಕ್ಷಕತ್ವದಲ್ಲಿ ಆಸಕ್ತಿ ಹೊಂದಿರುವವರಿಗೆ ಅವಕಾಶ ಒದಗಿಸುವ ನವೀನ ಪ್ರಯತ್ನವಾಗಿದೆ.
ಮಕ್ಕಳ ಒಟ್ಟಾರೆ ಬೆಳವಣಿಗೆಯತ್ತ ಗಮನ ಹರಿಸುವ ಉದ್ದೇಶದೊಂದಿಗೆ ಪ್ರಾರಂಭವಾಗುತ್ತಿರುವ ಈ ಶಾಲೆ, ಪೋಷಕರೂ ಹಾಗೂ ಮಕ್ಕಳೂ ಅತ್ಯಾಧುನಿಕ ಶೈಕ್ಷಣಿಕ ವ್ಯವಸ್ಥೆಯನ್ನು ಅನುಭವಿಸಬಹುದಾದ ಪ್ಲಾಟ್ಫಾರ್ಮ್ ಆಗಿ ರೂಪುಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ಶಾಲಾ ನಿರ್ವಾಹಕರನ್ನು ಸಂಪರ್ಕಿಸಬಹುದು.