ಉಳ್ಳಾಲ: ಯುವಜನಾಂಗಕ್ಕೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಸಲುವಾಗಿ ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಭಾಷಾಂತರಿಸಿ, ತಾಳೆಗರಿಯಲ್ಲಿರುವ ವಿಷಯ ಸಂಕಲ್ಪಿಸಿ ಕನ್ನಡದ ಓದುಗರಿಗೆ ಸುಲಭವಾಗಿ ತಿಳಿಸುವ ಉದ್ದೇಶದಿಂದ ಧರ್ಮ ಜ್ಞಾನ ಪುಸ್ತಕವನ್ನು ರಚಿಸಲಾಗಿದೆ ಎಂದು ಲೇಖಕ, ತೀಯ ಸಮಾಜದ ಒಂದನೇ ಗುರಿಕಾರ ಪ್ರಕಾಶ್.ಎಂ.ಉಳ್ಳಾಲ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಕ್ಲಿಕ್ ಸಭಾಭವನದಲ್ಲಿ ತೊಕ್ಕೊಟ್ಟು ಬಿ.ಬಿ.ಸಿ ಪ್ರಕಾಶನದಡಿ ಮುದ್ರಣಗೊಂಡ `ಧರ್ಮ ಜ್ಞಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದು ಆಚರಣೆಗಳಲ್ಲಿ ಹಲವು ನಂಬಿಕೆಗಳಿವೆ. ಅವೆಲ್ಲದಕ್ಕೂ ವೈಜ್ಞಾನಿಕ ಕಾರಣಗಳು ಇವೆ. ಇದನ್ನು ಯುವಜನಾಂಗಕ್ಕೆ ಪರಿಚಯಿಸುವ ಪ್ರಯತ್ನ ಪುಸ್ತಕದಲ್ಲಿದೆ. ಹಿಂದು ಸಮಾಜೋತ್ಸವದಲ್ಲಿ ಹೆಚ್ಚು ಯುವಜನಾಂಗ ಭಾಗವಹಿಸುವುದರಿಂದ ಅಲ್ಲಿಯೂ ಪುಸ್ತಕದ ಪ್ರಚಾರ ನಡೆಯಲಿದೆ ಎಂದರು. ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಕಾರ್ಯದರ್ಶಿ ಪದ್ಮನಾಭ ಮಾಡೂರು ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ತೀಯ ಸ್ವಸಹಾಯ ಸಂಘದ ಕಾರ್ಯದರ್ಶಿ ಪವನ್ ರಾಜ್ ಕೊಲ್ಯ, ನಿತಿನ್ ರಾಜ್ ಮಾಸ್ತಿಕಟ್ಟೆ, ಉದ್ಯಮಿ ಚಂದ್ರಕಾಂತ್ ತೊಕ್ಕೊಟ್ಟು, ಸತೀಶ್ ಫನಿಕರ್, ಸುರೇಂದ್ರ ಗಂಡಿ ಉಪಸ್ಥಿತರಿದ್ದರು. ತೀಯ ಸಮಾಜದ…
Author: UllalaVani
ಉಳ್ಳಾಲ: ಯಾವುದೇ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಆ ಭಾಗದ ಜನತೆ ಹಾಗೂ ಜವಾಬ್ದಾರಿಯುತ ಸಂಘ ಸಂಸ್ಥೆಗಳು ಸಂಘಟನೆಗಳ ಪಾತ್ರ ಬಹು ಮುಖ್ಯ. ಆ ನಿಟ್ಟಿನಲ್ಲಿ ನರಿಂಗಾನ ಗ್ರಾಮದ ಸೌರ್ಕುಡೇಲಿನಲ್ಲಿ ನೂತನ ಕಿರು ಸೇತುವೆ ನಿರ್ಮಾಣಕ್ಕಾಗಿ ಸಂಘ ಸಂಸ್ಥೆಗಳು ಹಾಗೂ ಇಲ್ಲಿನ ಜನರು ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ. ನೂತನ ಸೇತುವೆ ನಿರ್ಮಾಣದ ಮೂಲಕ ಅವರೆಲ್ಲರ ನಿರೀಕ್ಷೆ ಶೀಘ್ರದಲ್ಲಿ ಈಡೇರಲಿದ್ದು, ಈ ಯೋಜನೆಗೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ರಾಜ್ಯಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆಭಿಪ್ರಾಯಪಟ್ಟರು. ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‍ನಿಂದ ತೌಡುಗೋಳಿ ಸಂಪರ್ಕ ರಸ್ತೆಯ ಸರ್ಕುಡೇಲಿನಲ್ಲಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಿರು ಸೇತುವೆಗೆ ಭಾನುವಾರ ಶಿಲಾನ್ಯಾಸಗೈದು ಅವರು ಮಾತನಾಡಿದರು. ನರಿಂಗಾನ ಭಾಗದ ಅತಿಮುಖ್ಯ ಸೇತುವೆ ಸರ್ಕುಡೇಲು ಸೇತುವೆ ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಪ್ರಮುಖ ಕೊಂಡಿಯೇ ಆಗಿದೆ. ಸೇತುವೆ ನಿರ್ಮಾಣ ಕಾಲದಲ್ಲಿ ಇಲ್ಲಿನ ಭೂಮಾಲೀಕರು ಪರೋಪಕಾರಿ ಭಾವನೆ ತೋರಿದ ಹಿನ್ನೆಲೆಯಲ್ಲಿ ಸುಮಾರು ಐದು ದಶಕಗಳ ಹಿಂದೆಯೇ ಈ ವ್ಯಾಪ್ತಿಯಲ್ಲಿ…
ಉಳ್ಳಾಲ, ಫೆ. 15: ವಿಶ್ವಹಿಂದೂ ಪರಿಷತ್ ಸುವರ್ಣ ಮಹೋತ್ಸವದ ಅಂಗವಾಗಿ ಮಾ 1ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಭಾನುವಾರ ಅಸೈಗೋಳಿಯಿಂದ ಕುತ್ತಾರುವರೆಗೆ ಬೈಕ್ ರ‌್ಯಾಲಿ ನಡೆಯಿತು. ಅಸೈಗೋಳಿಯಿಂದ ದೇರಳಕಟ್ಟೆ , ಕುಂಪಲ, ಕೋಟೆಕಾರು ಬೀರಿ, ಮಾಡೂರು, ಸೋಮೇಶ್ವರ , ತೊಕ್ಕೊಟ್ಟು , ಉಳ್ಳಾಲ ಮಾರ್ಗವಾಗಿ ಕುತ್ತಾರು ಶ್ರೀ ಸಿದ್ಧಿವಿನಾಯಕ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಮಾಪನಗೊಂಡಿತು. ಬೈಕ್ ರ್ಯಾಲಿಗೆ ವಿಶ್ವಹಿಂದೂ ಪರಿಷತ್ ಮಾಜಿ ಕಾರ್ಯದರ್ಶಿ ಹಾಗೂ ನಿವೃತ್ತ ಅಧ್ಯಾಪಕ ವೆಂಕಪ್ಪ ಮಾಸ್ಟರ್ ಅಸೈಗೋಳಿ ಚಾಲನೆ ನೀಡಿದರು. ಹಿರಿಯರಾದ ಟಿ. ಅಂಬು, ವಿಶ್ವಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಗೋಪಾಲ ಕುತ್ತಾರ್, ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಪ್ರವೀಣ್ ಕುತ್ತಾರ್, ಪ್ರಖಂಡ ಸಂಚಾಲಕ ರವಿ ಅಸೈಗೋಳಿ, ಬಜೆಪಿ ಕೊಣಾಜೆ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ರೈ ಕ್ಕೆಮಜಲು, ವಿಶ್ವಹಿಂದೂ ಪರಿಷತ್ನ ಪ್ರಖಂಡ ಕಾರ್ಯದರ್ಶಿ ಬಿ.ನಾರಾಯಣ ಕುಂಪಲ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ರ‌್ಯಾಲಿ ಭಾಗವಹಿಸಿದರು.…
ಉಳ್ಳಾಲ : ನಾಗರಿಕ ಸಮಾಜದಲ್ಲಿ ವಿಜ್ಞಾನ ಮನುಕುಲಕ್ಕೆ ಒಳಿತನ್ನು ಉಂಟುಮಾಡಲು ಹೆಚ್ಚು ಉಪಯುಕ್ತವಾಗಬೇಕು. ಕೆಲವೊಂದು ಪ್ರಶ್ನೆಗಳಿಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ವಿಜ್ಞಾನ ವಾಸ್ತವಕ್ಕೆ ಹತ್ತಿರವಿದ್ದು ಜ್ಞಾನ ಹೆಚ್ಚಿಸವ ಕೆಲಸ ಮಾಡಿದರೆ ತತ್ವ ಯೋಚಿಸುವಂತೆ ಮಾಡುತ್ತದೆ ಎಂದು ಸುಪ್ರೀಂ ಕೋಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾಲಯ ಮತ್ತು ಪೀಪಲ್ಸ್ ಕೌನ್ಸಿಲ್ ಆಫ್ ಎಜುಕೇಶನ್ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪ್ರಥಮ ಅಖಿಲ ಭಾರತ ಪೀಪಲ್ಸ್ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ, ಬಳಿಕ ಸಮ್ಮೇಳನ ಪ್ರಯುಕ್ತ ಹೊರತಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಉಳ್ಳಾಲ: ಎಸ್ಎಸ್ಎಫ್ ಮತ್ತು ತಖ್ವಿಯತುಲ್ ಇಸ್ಲಾಂ ಯೆಂಗ್ಮೆನ್ಸ್ ಎಸೋಸಿಯೇಶನ್ ಕಲ್ಕಟ್ಟ ಇದರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸ್ವಲಾತ್ ವಾರ್ಷಿ ಕ ಕಾರ್ಯಕ್ರಮಕ್ಕೆ ಅಗಮಿಸಿದ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಇಲ್ಯಾಸ್ ಜುಮಾ ಮಸೀದಿ ಕಟ್ಟಡಕ್ಕೆ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭ ಇಲ್ಯಾಸ್ ಜುಮಾ ಮಸ್ಜಿದ್ ಉಪಾಧ್ಯಕ್ಷರುಗಳಾದ ಮೊಹಮ್ಮದ್ ಖಂಡಿಕ, ಮೊಯಿದಿನ್ ಕುಂಞ, ಇಲ್ಯಾಸ್ ಮಸೀದಿಯ ಖತೀಬ್ ಮಹಮ್ಮದ್ ಹನೀಫ್ ಸಖಾಫಿ, ಎಸ್ವೈಎಸ್ ಕಲ್ಕಟ್ಟ ಶಾಖೆಯ ಅಧ್ಯಕ್ಷ ಮೋನು ಕಲ್ಕಟ್ಟ, ಮಂಜನಾಡಿ ಗ್ರಾ.ಪಂ. ಉಪಾಧ್ಯಕ್ಷ ಕುಂಞಿಬಾವ ಹಾಜಿ ಮುಂತದವರು ಉಪಸ್ಥಿತರಿದ್ದರು.

