ಮಲ್ಪೆ : ಎಕೆಎಂಎಸ್ ಬಸ್ ಮಾಲಕ ಸೈಪು ಯಾನೇ ಸೈಫುದ್ದೀನ್ ಆತ್ರಾಡಿಯನ್ನು ಹತ್ಯೆಗೈದಿರುವ ಘಟನೆ ಇಂದು (ಶನಿವಾರ) ಬೆಳಿಗ್ಗೆ ಕೊಡವೂರು ಸಮೀಪದ ಸಾಲ್ಮರ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಸೈಫುದ್ದೀನ್ ಅವರು ತಮ್ಮ ಮನೆಯಲ್ಲಿ ಒಬ್ಬರೇ ಇರುವ ವೇಳೆ ಆಗಮಿಸಿದ ದುಷ್ಕರ್ಮಿಗಳು ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಡಿವೈಎಸ್ಪಿ ಪ್ರಭು ಡಿಟಿ ಮೊದಲಾದವರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Author: UllalaVani
ಮಂಗಳೂರು : ಖಾಸಗಿ ಬಸ್‌ಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡುವ ಬಸ್‌ಗಳಲ್ಲಿ ಬಾಗಿಲು ಕಡ್ಡಾಯವಾಗಿ ಇರುವುದನ್ನು ಖಾತರಿಪಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ ಮಲ್ಲಾಡ್ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದರು. ಮುಡಿಪುವಿನಲ್ಲಿ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಗಿಲುಗಳಿಲ್ಲದೇ ರಸ್ತೆಗೆ ಇಳಿಯುವ ಬಸ್‌ಗಳಿಗೆ ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೆಟ್) ನೀಡಬೇಡಿ ಎಂದು ಹೇಳಿದರು. ‘ಇ ಬಸ್‌ಗಳಿಗೆ ಬೇಡಿಕೆ ಸಲ್ಲಿಸಿದ್ದು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಲಿರುವ ಬಸ್‌ಗಳ ಖರೀದಿಗಾಗಿ ಟೆಂಡರ್ ಕರೆಯಬೇಕಾಗಿದೆ. ಇದಕ್ಕೆ ಕನಿಷ್ಟ ಆರು ತಿಂಗಳ ಸಮಯ ಬೇಕಾದೀತು. ಬಸ್‌ಗಳನ್ನು ಒದಗಿಸಿದರೆ ಮಂಗಳೂರಿಗೂ ಹಂಚಲಾಗುವುದು’ ಎಂದು ಅವರು ತಿಳಿಸಿದರು. ‘ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ನವರು ಹೆಚ್ಚುವರಿ ದರ ಪಡೆಯುವುದನ್ನು ತಡೆಯಲು 2300 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆ ಇಳಿಸಲಾಗುವುದು. ಗಣೇಶ ಹಬ್ಬದ ಸಂದರ್ಭದಲ್ಲಿ 1200 ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು. 2022 ರ ಸೆ.7 ರಂದು ಮಂಗಳೂರು ಕಾಲೇಜಿಗೆ…
ಉಳ್ಳಾಲ : ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವೇಳೆ ಜಾತಿ, ಉಪಜಾತಿ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಉಳ್ಳಾಲ ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪ್ರಶ್ನಾವಳಿಯ 8ನೇ ಕಾಲಂನಲ್ಲಿರುವ ‘ರಿಲೀಜನ್/ಧರ್ಮ’ ಎಂದಿರುವಲ್ಲಿ ಎಲ್ಲ ಮುಸ್ಲಿಮರು ‘ಇಸ್ಲಾಮ್’ ಎಂದು ಬರೆಸಬೇಕು. 9ನೇ ಕಾಲಂನಲ್ಲಿರುವ ‘ಜಾತಿ’ ಎಂದಿರುವಲ್ಲಿ ಮುಸ್ಲಿಮ್’ ಎಂದೂ, 10ನೇ ಕಾಲಂನಲ್ಲಿ ಉಪಜಾತಿ/ ಸಬ್ ಕಾಸ್ಟ್ ಎಂದಿರುವಲ್ಲಿ ಬ್ಯಾರಿ ಭಾಷೆಯವರು ‘ಬ್ಯಾರಿ ಮುಸ್ಲಿಮ್’ ಎಂದು ದಾಖಲಿಸಬೇಕು. ಪ್ರಶ್ನಾವಳಿಯ 15ನೇ ಕಾಲಂನಲ್ಲಿ ‘ಮಾತೃಭಾಷೆ/ಮದರ್ ಟಾಂಗ್’ ಎಂದಿರುವಲ್ಲಿ ಬ್ಯಾರಿ ಭಾಷೆಯವರು ‘ಬ್ಯಾರಿ’ ಎಂದೂ ಉರ್ದು, ನವಾಯತ್ ಇತ್ಯಾದಿ ಭಾಷೆಯವರು ತಮ್ಮ ಮಾತೃಭಾಷೆಯನ್ನು ಹೆಸರಿಸಬಹುದು ಎಂದು ಸೂಚಿಸಿದ್ದಾರೆ. ಸಮೀಕ್ಷೆಗೆ ಬರುವ ಸರಕಾರಿ ನೌಕರರನ್ನು ಆದರದಿಂದ ಸ್ವಾಗತಿಸಿ, ಸಂಪೂರ್ಣ ಸಹಕಾರ ನೀಡಬೇಕು. ತಮ್ಮ ಪಡಿತರ ಚೀಟಿ, ಕುಟುಂಬದ ಆರು ವರ್ಷಕ್ಕಿಂತ ಹೆಚ್ಚು…
ಉಳ್ಳಾಲ : ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಉಳ್ಳಾಲ ಸಮುದ್ರ ತೀರದ ಅಳಿವೆಬಾಗಿಲು ಬ್ರೇಕ್ ವಾಟರ್ ಕಲ್ಲುಗಳ ಮಧ್ಯೆ ಸಿಲುಕಿರುವುದನ್ನು ಉಳ್ಳಾಲ ಮೊಗವೀರಪಟ್ನ ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು 3-4 ಕಿ.ಮೀ ದೂರ ಎತ್ತಿಕೊಂಡು ಸಾಗಿ ಆಂಬುಲೆನ್ಸ್ ವಾಹನಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರುಗಳಾದ ಯೋಗೀಶ್ ಅಮೀನ್, ಪ್ರಸಾದ್ ಸುವರ್ಣ, ಚಂದ್ರಹಾಸ್ ಸುವರ್ಣ ಎಂಬವರು ತೀರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೆಗಲ ಮೇಲೆ ಇಟ್ಟು ಆಂಬುಲೆನ್ಸ್ ವಾಹನಕ್ಕೆ ತಂದಿರಿಸಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಅಳಿವೆಬಾಗಿಲು ಕಲ್ಲುಗಳ ಮಧ್ಯೆ ಮೀನಿಗೆಂದು ಗಾಳ ಹಾಕುತ್ತಿದ್ದ ತಂಡಕ್ಕೆ ಕೊಳೆತ ಮೃತದೇಹ ಕಲ್ಲುಗಳ ಮಧ್ಯೆ ಸಿಲುಕಿರುವುದು ಗೋಚರಿಸಿದೆ. ತಕ್ಷಣ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಉಳ್ಳಾಲ ಪೋಲೀಸರು ಶಿವಾಜಿ ಜೀವರಾಕ್ಷಕ ಈಜುಗಾರರ ಸದಸ್ಯರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರಿಗೆ ತಂಡ ಸಹಕರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸುಮಾರು 40-45ರ ಹರೆಯದ…
ಮಂಗಳೂರು: ಇಂದಿನ ಆಧುನಿಕ ಯುಗದಲ್ಲಿ ಸೊಸೈಟಿಯ ಕಾರ್ಯಭಾರವನ್ನು ಅತಿ ಶೀಘ್ರದಲ್ಲಿ ಪ್ರತಿಯೊಬ್ಬ ಸದಸ್ಯರು ತಿಳಿದುಕೊಳ್ಳಲು ವೆಬ್ಸೈಟ್ ಸಹಕಾರಿಯಾಗಲಿದೆ ಎಂದು ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷರಾದ ಕೆ. ಎಂ. ಕೆ. ಮಂಜನಾಡಿ ಹೇಳಿದರು.ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಶಿಕ್ಷಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವೆಬ್ಸೈಟ್ ಅನ್ನು ಅನಾವರಣಗೊಳಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಉಪಾಧ್ಯಕ್ಷರಾದ ಉದಯಕುಮಾರ್, ಕಾರ್ಯನಿರ್ವಹಣಾಧಿಕಾರಿ ಶರ್ಮಿಳ ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳು ಮತ್ತು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಬೆಂಗಳೂರು: ರಾಜ್ಯದ ಏಕೈಕ ಸ್ಕೌಟ್ ಅಧ್ಯಾಪಕರೆಂಬ ನೆಲೆಯಲ್ಲಿ ಇತ್ತೀಚೆಗೆ ರಾಜ್ಯ ಪ್ರಶಸ್ತಿಯನ್ನು ಪಡೆದು ಪುರಸ್ಕೃತರಾದ ಅಂಬ್ಲಮೊಗರು ಶಾಲಾ ಮುಖ್ಯಶಿಕ್ಷಕ ಜಗದೀಶ್ ಶೆಟ್ಟಿ ಎಲಿಯಾನ ಇವರನ್ನು ಗೌರವಾನ್ವಿತ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ಇವರು ಬೆಂಗಳೂರು ರಾಜಭವನದಲ್ಲಿ ಗೌರವ ಸನ್ಮಾನ ಮಾಡಿದರು.
ಮಂಗಳೂರು : ಕೈರಂಗಳ ಪುಣ್ಯಕೋಟಿನಗರ ಶಾರದಾಗಣಪತಿ ವಿದ್ಯಾಕೇಂದ್ರ ಶಾಲೆಯ ವಾಲಿಬಾಲ್ ತಂಡವು ನಗರದ ಸಂತ ಆಲೋಶಿಯಸ್ ಕಾಲೇಜಿನಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಅಂತರಕಾಲೇಜು ವಾಲಿಬಾಲ್ ಟೂರ್ನಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಶಾಲೆಯ ಹೆಮ್ಮೆಯ ವಾಲಿಬಾಲ್ ತರಬೇತುದಾರರಾದ ನಿಖಿಲ್ ಗಟ್ಟಿ ಅವರ ಮಾರ್ಗದರ್ಶನದಲ್ಲಿ ತಂಡವು ತರಬೇತು ಪಡೆದು ಅದ್ಭುತ ಕೌಶಲ್ಯವನ್ನು ಪ್ರದರ್ಶಿಸಿ ಚಾಂಪಿಯನ್ ಪಡೆದುಕೊಂಡಿದೆ. ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ತೊಕ್ಕೊಟ್ಟು : ಸಹ್ಯಾದ್ರಿ ಕೊ ಆಪರೇಟಿವ್ ಸೊಸೈಟಿ ಲಿಮಿಟೆಡ್ ತೊಕ್ಕೊಟ್ಟು ಸೊಸೈಟಿಯು 2024-25 ರ ಆರ್ಥಿಕ ವರ್ಷದಲ್ಲಿ ರೂಪಾಯಿ 71 ಲಕ್ಷ ಷೇರು ಬಂಡವಾಳ ಹೊಂದಿದ್ದು 2 ಕೋಟಿ 91 ಲಕ್ಷ ಠೇವಣಿಗಳನ್ನು ಸಂಗ್ರಹಿಸಿದೆ ಮತ್ತು 1 ಕೋಟಿ 97 ಲಕ್ಷ ಸಾಲಗಳನ್ನು ನೀಡಿರುತ್ತದೆ ಎಂದು ಸೊಸೈಟಿ ಅಧ್ಯಕ್ಷರಾದ ಕೆ.ಟಿ ಸುವರ್ಣ ಹೇಳಿದರು. ತೊಕ್ಕೊಟ್ಟು ಸಮೃದ್ಧಿ ಸಭಾಂಗಣದಲ್ಲಿ ಜರಗಿದ ಸಹ್ಯಾದ್ರಿ ಕೊ ಆಪರೇಟಿವ್ ಸೊಸೈಟಿ ಲಿಮಿಟೆಡ್ ತೊಕ್ಕೊಟ್ಟು ಉಳ್ಳಾಲ ಮಂಗಳೂರು ಇದರ 2024-25 ರ ಸಾಲಿನ ಪ್ರಥಮ ವರ್ಷದ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪ್ರಸ್ತುತ ಸಂಘದಲ್ಲಿ 5 ಕೋಟಿ 20 ಲಕ್ಷ ಠೇವಣಿ ಇದ್ದು 4 ಕೋಟಿ 78 ಲಕ್ಷ ಸಾಲವನ್ನು ಸದಸ್ಯರಿಗೆ ನೀಡಲಾಗಿದೆ. ಸೊಸೈಟಿಯು ಮುಂದಿನ ದಿನಗಳಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಲಿದೆ ಮತ್ತು ಈಗಾಗಲೇ ಸೊಸೈಟಿ ಮುಖಾಂತರ 15 ಸ್ವ ಸಹಾಯ ಗುಂಪು ಪ್ರಾರಂಭಗೊಂಡಿದೆ ಇದನ್ನು 50 ಗುಂಪುಗಳಿಗೆ ಏರಿಸುವ ಗುರಿ ಹೊಂದಿದೆ ಎಂದ ಅವರು ಸೊಸೈಟಿಯು ಅಲ್ಪ…
ಮಂಗಳೂರು : ಕರ್ನಾಟಕ ಸರ್ಕಾರದ ಗಾಣಿಗರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ದ.ಕ. ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಸಂಘ (ರಿ.), ಅತ್ತಾವರದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ನೇಮಕಗೊಂಡಿದ್ದಾರೆ.ಈ ಸಂದರ್ಭದಲ್ಲಿ ವಿಶ್ವ ಗಾಣಿಗರ ಚಾವಡಿ (ರಿ.), ಮಂಗಳೂರು ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. “ನಿಮ್ಮ ಅವಧಿಯಲ್ಲಿ ಗಾಣಿಗ ಸಮುದಾಯಕ್ಕೆ ಸರ್ಕಾರದ ವತಿಯಿಂದ ಹಲವಾರು ಅನುದಾನಗಳು ದೊರೆತು, ಸಮಸ್ತ ಗಾಣಿಗ ಸಮುದಾಯದ ಅಭಿವೃದ್ಧಿಯಾಗಲಿ” ಎಂದು ವಿಶ್ವ ಗಾಣಿಗರ ಚಾವಡಿ ಪ್ರಕಟಣೆಯಲ್ಲಿ ಹಾರೈಕೆ ವ್ಯಕ್ತಪಡಿಸಿದೆ.
ಉಳ್ಳಾಲ : ತೊಕ್ಕೊಟ್ಟಿನಲ್ಲಿರುವ ಮಂಗಳೂರು ರಾಷ್ಟೋತ್ಥಾನ ವಿದ್ಯಾ ಕೇಂದ್ರದ 10 ವಿದ್ಯಾರ್ಥಿನಿಯರ ತಂಡವು ಹರಿಯಾಣದ ಕುರುಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಫುಟ್ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, 2026 ಜನವರಿಯ ಮೊದಲ ವಾರದಲ್ಲಿ ಜಾರ್ಖಂಡಿನ ರಾಂಚಿಯಲ್ಲಿ ನಡೆಯುವ ಎಸ್ ಜಿಎಫ್‌ಐ ಫುಟ್ಬಾಲ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದುಕೊಂಡಿದೆ. ವಿದ್ಯಾ ಕೇಂದ್ರದ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜಪ್ಪ ಮತ್ತು ಮಾಲಾಶ್ರೀ ಅವರು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿದ್ದರು. ಈ ತಂಡವನ್ನು ವಿದ್ಯಾ ಕೇಂದ್ರದ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ. ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರಖ್ಯಾತ್ ರೈ, ಶಿಕ್ಷಕರು, ಮಾತೃಭಾರತಿ ಸದಸ್ಯರು ಅಭಿನಂದಿಸಿದರು. ಫುಟ್‌ಬಾಲ್ ಪಂದ್ಯಾಟದಲ್ಲಿ ಮೌಲ್ಯಾ ಪಿ, ಶಾರಧಿ, ಪ್ರಣ್ಯಾ ಪಿ. ಶೆಟ್ಟಿ, ಪ್ರತೀಕ್ಷಾ ಕೆ.ಎಸ್. ಲಕ್ಷ್ಯಾ ಸಿ. ಅಜಂತಾ, ಕುಶಿ ಕರ್ಕೇರಾ, ದೇವಿಕಾ ಎಸ್. ಅಳ್ವ, ಕೀರ್ತನಾ ಶೆಟ್ಟಿ, ಮೌಲ್ಯಾಶ್ರೀ, ತಸ್ಮಯಿ ಭಟ್ನಾಗರ್ ಭಾಗವಹಿಸಿದ್ದರು.

