ಉಳ್ಳಾಲ: ಇಪ್ಪತ್ತೈದು ವರುಷಗಳ ಕಾಲ ನಿರಂತರವಾಗಿ ದೇಶದ ಸೇವೆಗೈದ ಪ್ರಧಾನಿ ನರೇಂದ್ರ ಮೋದಿಜಿಯವರು ಪಕ್ಷ ಸಂಘಟನೆಗೆ ತನ್ನನ್ನ ಸಂಪೂರ್ಣವಾಗಿ ವ್ಯಯಿಸಿಕೊಂಡವರಾಗಿದ್ದಾರೆ.ಮೋದಿಯವರ ಆಡಳಿತ ವೈಖರಿಯು ಇಡೀ ಜಗತ್ತಿಗೆ ಮಾದರಿಯಾಗಿ,ಅವರಿಗೆ ಇನ್ನಷ್ಟು ದೇಶ ಸೇವೆ ಮಾಡುವ ಶಕ್ತಿಯನ್ನು ಭಗವಂತನು ಕರುಣಿಸಲಿಯೆಂದು ಹಿರಿಯ ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರ 25 ವರ್ಷಗಳ ಸೇವೆ ಮತ್ತು ಸಮರ್ಪಣೆ ಹಾಗೂ ವಿಕಸಿತ ಭಾರತದ ಸಂಕಲ್ಪದ ಅಭಿಯಾನದ ಅಂಗವಾಗಿ ಬಿಜೆಪಿ ಮುನ್ನೂರು ಮಹಾಶಕ್ತಿ ಕೇಂದ್ರದ ವತಿಯಿಂದ ಕುತ್ತಾರುವಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ಶುಕ್ರವಾರದಂದು ವಿದ್ಯಾರ್ಥಿಗಳಿಗಾಗಿ ನಡೆದ ಚಿತ್ರಕಲಾ ಸ್ಪರ್ಧೆ,ಭಾಷಣ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು ಮಾತನಾಡಿ 2014 ರಲ್ಲಿ ಮೋದಿಜಿ ದೇಶದ ಆಡಳಿತ ಚುಕ್ಕಾಣಿ ಹಿಡಿಯದಿದ್ದರೆ ಭಾರತವು ಛಿದ್ರ,ಛಿದ್ರವಾಗುವ ಸಾಧ್ಯತೆಯಿತ್ತು.ದೇಶವಾಸಿಗಳಿಗೆ ಎರಡು ಸಾವಿರಕ್ಕಿಂತಲೂ ಹೆಚ್ಚಿನ ಜನಪ್ರಿಯ ಯೋಜನೆಗಳನ್ನ ಅನುಷ್ಟಾನಗೊಳಿಸಿದ ಕೀರ್ತಿಯು ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.ಮಕ್ಕಳು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಂಡು ದೇಶ ಮುನ್ನಡೆಸುವ ಕಾರ್ಯ ನಡೆಸಬೇಕೆಂದು ಕರೆ ನೀಡಿದರು.
ಈ ವೇಳೆ ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಮೇಲ್ವಿಚಾರಕರಾದ ಶಿಲ್ಪ ಮತ್ತು ಮಮತಾ ಅವರನ್ನ ಸನ್ಮಾನಿಸಲಾಯಿತು.
ವಿವಿಧ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಮಂಡಲ ಪ್ರಭಾರಿಗಳಾದ ಪೂಜಾ ಪೈ,ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷರಾದ ಮಂಜುಳಾ ರಾವ್,ಪ್ರಧಾನ ಕಾರ್ಯದರ್ಶಿ ಲಿಖಿತಾ ಶೆಟ್ಟಿ ,ಸೋಮೇಶ್ವರ ಪುರಸಭೆ ಅಧ್ಯಕ್ಷರಾದ ಕಮಲ,ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್.ಕೆ.ಆರ್,ದಯಾನಂದ ತೊಕ್ಕೊಟ್ಟು,ಮುನ್ನೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಕಾರ್ಯದರ್ಶಿ ಸುರೇಖಾ ಸ್ವಾಗತಿಸಿ,ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು.ಮಹಿಳಾ ಮೋರ್ಚ ಮಂಡಲ ಉಪಾಧ್ಯಕ್ಷರಾದ ಹೇಮಲತಾ ಭಂಡಾರಿ ವಂದಿಸಿದರು.
25 ವರುಷಗಳ ಕಾಲ ದೇಶ ಸೇವೆಗೈದ ಪ್ರಧಾನಿ ನರೇಂದ್ರ ಮೋದಿಜಿಯವರ ಎಪ್ಪತ್ತಾರನೇ ಹುಟ್ಟು ಹಬ್ಬದ ಪ್ರಯುಕ್ತ ಒಂದು ತಿಂಗಳ ಕಾಲ ಸೇವಾ ಸಂಕಲ್ಪವನ್ನು ಹಮ್ಮಿಕೊಳ್ಳಲಾಗಿದೆ.ಎಳೆಯ ಮಕ್ಕಳಲ್ಲಿ ದೇಶಪ್ರೇಮ ,ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ವಿವಿಧ ಸ್ಫರ್ದೆಗಳನ್ನ ಏರ್ಪಡಿಸಲಾಗಿದ್ದು,ಮುಂದೆ ಜಿಲ್ಲಾ ಮಟ್ಟದ ಸ್ಫರ್ಧೆ ನಡೆಯಲಿದೆ.ಮಂಗಳೂರು ಮಂಡಲ ವ್ಯಾಪ್ತಿಯಲ್ಲಿ ರಕ್ತದಾನ,ವೈದ್ಯಕೀಯ ಶಿಭಿರ,ಸ್ವಚ್ಚತೆ ಸೇರಿದಂತೆ ಅನೇಕ ಸೇವಾ ಕಾರ್ಯಗಳು ನಡೆಯಲಿವೆ.
ಪೂಜಾ ಪೈ, ಬಿಜೆಪಿ ಮಂಗಳೂರು ಮಂಡಲ ಪ್ರಭಾರಿ.


