


ಬೋಳಿಯಾರು : ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೋಳಿಯಾರು ಗ್ರಾಮದ ಚೇಳೂರು ನಿವಾಸಿ ಸತೀಶ್ ಯಾನೆ ಕುಟ್ಟ (40) ಚಿಕಿತ್ಸೆ ಫಲಕಾರಿಯಾಗದೆ ಸೆ.21 ರಂದು ಮೃತಪಟ್ಟಿದ್ದಾರೆ.
ಸೆ.19 ರಂದು ಸತೀಶ್ ಹಾಗೂ ಮೊಹಮ್ಮದ್ ಇಸಾಕ್ ಇಬ್ಬರು ಬೈಕಿನಲ್ಲಿ ಮುಡಿಪು ಪಜೀರು ಮಾರ್ಗವಾಗಿ ಕೊಣಾಜೆ ಕಡೆಗೆ ತೆರಳುತ್ತಿರುವಾಗ ಎದುರಿನಿಂದ ಹಿಮಾಲಯನ್ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದಿದೆ. ಸತೀಶ್ ಅವರ ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತೀಶ್ ನಿನ್ನೆ ಮೃತಪಟ್ಟಿದ್ದಾರೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಸತೀಶ್ ಕಳೆದ ೨೮ ವರ್ಷಗಳಿಂದ ಬಿಜೆಪಿ ಮಂಗಳೂರು ಮಂಡಲದ ಮುಖಂಡ ಹೇಮಂತ್ ಶೆಟ್ಟಿ ದೇರಳಕಟ್ಟೆ ಅವರ ಜತೆಗೇ ಕಟ್ಟಡ ಗುತ್ತಿಗೆ ಸಂಸ್ಥೆಯಲ್ಲಿ ದುಡಿಯುತ್ತಿದ್ದರು. ಅವಿವಾಹಿತರಾಗಿರುವ ಸತೀಶ್
ತಾಯಿ , ಇಬ್ಬರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


