ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ (ಸೆ. 19) ಕುಟುಂಬಸ್ಥರು ಕೈಗೊಂಡ ನಿರ್ಧಾರದಿಂದಾಗಿ ಯಶಸ್ವಿ ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು, ನಿಧನರಾದ ಪ್ರಕಾಶ್ ಆಚಾರ್ಯ ಎಂಬವರು ನಾಲ್ವರು ರೋಗಿಗಳ ಬದುಕಿಗೆ ಬೆಳಕಾಗಿದ್ದಾರೆ. ಉಳ್ಳಾಲ ತಾಲೂಕಿನ ಕೋಟೆಕಾರ್ ಸಮೀಪದ ಬೀರಿಯ ಮದೂರು ಸೈಟ್ ನಿವಾಸಿ ಪ್ರಕಾಶ್ ಆಚಾರ್ಯ (50) ನಿಧನರಾಗಿದ್ದು, ಅವರ ಅಂಗಾಂಗವನ್ನು ದಾನ ಮಾಡಲಾಗಿದೆ ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್. ತಿಳಿಸಿದ್ದಾರೆ.

ಪ್ರಕಾಶ್ ಆಚಾರ್ಯ ಅವರು 2026 ಸೆಪ್ಟೆಂಬರ್ 14ರಂದು ತಮ್ಮ ಮನೆಯ ಬಳಿ ಆಕಸ್ಮಿಕವಾಗಿ ಜಾರಿ ಬಿದ್ದ ಪರಿಣಾಮವಾಗಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಹಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರೂ, ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಲಿಲ್ಲ. ಆಸ್ಪತ್ರೆಯ ನುರಿತ ವೈದ್ಯರನ್ನೊಳಗೊಂಡ ಮೆದುಳು ನಿಷ್ಕ್ರಿಯ ಪರಿಶೀಲನಾ ಸಮಿತಿಯು ಎಲ್ಲಾ ನಿಗದಿತ ತಪಾಸಣೆಗಳನ್ನು ಪೂರ್ಣಗೊಳಿಸಿದ ಬಳಿಕ ಸೆಪ್ಟೆಂಬರ್ 17ರಂದು ಪ್ರಕಾಶ್ ಆಚಾರ್ಯ ಅವರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿತು.
ಇದನ್ನೂ ಓದಿ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆ
ಪ್ರಕಾಶ್ ಆಚಾರ್ಯ ಅವರ ಅಗಲಿಕೆಯ ನಡುವೆಯೂ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡರು.ಅದರಂತೆರ್ ಸೆ.19ರಂದು ಅಂಗಾಂಗ ಸಂಗ್ರಹ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿತು.
ಕೆಎಂಸಿ ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ತಂಡವು ಎರಡು ಕಿಡ್ನಿಗಳನ್ನು ಸಂಗ್ರಹಿಸಿದ್ದು, ಕೆಎಂಸಿ ಅತ್ತಾವರ ತಂಡವು ಎರಡು ಕಣ್ಣುಗಳ ಕಾರ್ನಿಯಾಗಳನ್ನು ಸಂಗ್ರಹಿಸಿದೆ. ಈ ಸಂಕೀರ್ಣ ಹಾಗೂ ಸೂಕ್ಷ್ಮ ಪ್ರಕ್ರಿಯೆಯನ್ನು ವೆಸ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ. ಶಿವಪ್ರಕಾಶ್ ಡಿ.ಎಸ್ ಅವರ ನೇತೃತ್ವ ದಲ್ಲಿ ಹಲವು ವಿಭಾಗಗಳ ವೈದ್ಯಕೀಯ ತಂಡಗಳು ಶ್ರಮಿಸಿದೆ. ಡಾ .ಜೆಕೊ ಜೇಕಬ್,ಡಾ. ಮೇಘನಾ ಮಾಢಿ, ಡಾ. ಶರತ್ ಬಾಬು, ಡಾ. ಅಭಿಷೇಕ್ ಆಚಾರ್ಯ,ಡಾ. ರೆನಿಟಾ, ಡಾ. ಅಂಶುಲ್,ಡಾ. ಅವಂತಿಕಾ ತ್ಯಾಗರಾಜನ್,ಡಾ. ಚಾನುಕ್ಯ ಚಲಸಾನಿ, ಡಾ. ಶ್ವೇತಾ,ಡಾ. ಚೈತ್ರಾ ಇವರೊಂದಿಗೆ ಈ ಪ್ರಕ್ರಿಯೆಯನ್ನು ಡಾ. ಅಭಿಷೇಕ್ ಆಚಾರ್ಯ ಮತ್ತು ಡಾ. ರೆನಿಟಾ ಅವರು ಆರಂಭಿಸಿದರು. ಡಾ.ಶುಭಾ, ಡಾ.ಮಣಿಕಾಂತ್, ಡಾ. ದೀಪಾ, ಡಾ. ಮನಮೋಹನ್, ಡಾ. ಅವಿನಾಶ್, ಡಾ. ಪ್ರಮೋದ್ ನರ್ಸಿಂಗ್ ಅಧಿಕಾರಿಗಳಾದ ಡಯಾನಾ, ಜಸಿಂತಾ ಡಿ ಸೋಜ, ಸೌಮ್ಯಾ ಶಿವಕುಮಾರ್, ಒಟಿ ತಂತ್ರಜ್ಞ ಕೌಶಿಕ್, ಗ್ರೂಪ್ ಆ ಸಿಬ್ಬಂದಿ ಜಯಪ್ರಕಾಶ್, ನಿಖಿತ್, ಕರುಣಾಕರ್ ನೆರವು, ನರ ರೋಗ ಶಸ್ತ್ರ ಚಿಕಿತ್ಸಕರಾದ ಡಾ ಸದಾನಂದ ಪೂಜಾರಿ, ಡಾ.ರೋಹನ್ ಶೆಟ್ಟಿ, ಆರ್ಎಂಒ ಡಾ. ಮಧುಸೂದನ್ ಮಾರ್ಗದರ್ಶನ ನೀಡಿದರು. ಬಳಿಕ ಫೋರೆನ್ಸಿಕ್ ತಜ್ಞ ಡಾ. ರಮೇಶ್ ತಂಡ, ರಾಜ್ಯ ಎಸ್ಒಟಟಿಒ ಸಂಯೋಜಕ ರಾದ ನೌಶಾದ್, ಡಿಡಿ ಡಾ. ಅರುಣ್ ಕುಮಾರ್, ಸಂಚಾಲಕರಾದ ಡಾ. ರವಿರಾಜ್ ಶೆಟ್ಟಿ ವಲಯ ಸಂಯೋಜಕಿ ಪದ್ಮಾ ಮತ್ತು ಕೌನ್ಸಿಲರ್ ಶಿಲ್ಪಾ ಸಮನ್ವಯತೆಯಿಂದಾಗಿ ಅಂಗಾಂಗ ಸಾಗಣೆ ಯಶಸ್ವಿಯಾಗಿ ನಡೆಯಿತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

