ವರ್ಕಾಡಿ-ನರಿಂಗಾನ ಗಡಿಯಲ್ಲಿರುವ ಬಾವಲಿಗುಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಆಶ್ರಯದಲ್ಲಿ 12ನೇ ವರ್ಷದ ಗಣೇಶೋತ್ಸವ ಸೋಮವಾರ ನಡೆಯಿತು .


ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಫರೀದ್, ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ನರಿಂಗಾನ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ನವಾಜ್ ನರಿಂಗಾನ, ಧಾರ್ಮಿಕ ಮುಖಂಡ ಶ್ರೀ ಕೃಷ್ಣ ಶಿವಕೃಪ ಕುಂಜತ್ತೂರು, ಪ್ರಗತಿಪರ ಕೃಷಿಕ ಚಂದ್ರಹಾಸ ಶೆಟ್ಟಿ ಮೋರ್ಲ, ಚಲನಚಿತ್ರ ನಟ ಪ್ರಕಾಶ್ ತೂಮಿನಾಡು, ಚಲನಚಿತ್ರ ನಿರ್ದೇಶಕ ಜೆ. ಪಿ. ತೂಮಿನಾಡು, ಬೆಂಗಳೂರಿನ ಎಂಇಇ ಲಿ. ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಬೋಳ ಸಂತ ಲಾರೆನ್ಸ್ ಚರ್ಚಿನ ಧರ್ಮಗುರು ಫಾ. ಪೀಟರ್ ಡಿಸೋಜ ಅವರನ್ನು ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಮನರಂಜನೆ ಪ್ರದರ್ಶನ ನಡೆಯಿತು
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ನಿವೃತ್ತ ಮುಖ್ಯಶಿಕ್ಷಕ ದೇವಪ್ಪ ಶೆಟ್ಟಿ ಚಾವಡಿ ಬೈಲು, ದ.ಕ ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಗಿರೀಶ್ ಆಳ್ವ ಮೋರ್ಲ, ಭಾಜಪ ಉತ್ತರ ಕೇರಳ ವಲಯ ಸಮಿತಿ ಉಪಾಧ್ಯಕ್ಷ ವಿಜಯಕುಮಾರ್ ರೈ, ಮಂಜೇಶ್ವರ ಮಂಡಲ ಬಾಜಪದ ಅಧ್ಯಕ್ಷ ಆದರ್ಶ್ ಬಿ ಎಂ, ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೋಸೆಫ್ ಕುಟಿನ್ಹ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಂದರ ಪೂಜಾರಿ ಕೋಡಿಮಜಲ್ , ಮುರಲೀಧರ ಶೆಟ್ಟಿ ಮೋರ್ಲ, ರೆಹ್ಮಾನ್ ಚಂದಹಿತ್ಲು, ಕಾರ್ಯಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಭಂಡಾರಮನೆ, ಲಕ್ಷ್ಮೀ ನಾರಾಯಣ ಹೊಳ್ಳ, ಶಂಕರ ನಾರಾಯಣ ಹೊಳ್ಳ, ಜಗದೀಶ್ ಆಳ್ವ ಕುವ್ವೆತ್ತಬೈಲ್, ಪ್ರಧಾನ ಸಂಚಾಲಕರಾದ ಹರೀಶ್ ಕನ್ನಿಗುಳಿ, ಗೌರವ ಸಲಹೆಗಾರ ಪ್ರೇಮಾನಂದ ರೈ ನೆತ್ತಿಲ ಕೋಡಿ, ಸತೀಶ್ ಮಲಿ, ನವೀನ್ ಶೆಟ್ಟಿ ಮಂಗಲ್ಪಾಡಿ , ವಿನು ಶೆಟ್ಟಿ ತಲಪಾಡಿ, ಮನೋಜ್ ಶೆಟ್ಟಿ ನೀರೋಳಿಕೆ, ಮನೋಹರ್ ಶೆಟ್ಟಿ ಗುಮ್ಮೆಗುಳಿ, ಜಿತೇಶ್ ಶೆಟ್ಟಿ ಪೂಂಜರಮನೆ ಸೇರಿದಂತೆ ಉತ್ಸವ ಪೋಷಕರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರವಿ ಮುಡಿಮಾರು ಸ್ವಾಗತಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಅಡ್ಕ ವಂದಿಸಿದರು.
ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ನಿರೂಪಿಸಿದರು



