ಕೊಣಾಜೆ : ಯುವ ಸಂಗಮ್ ಪಾವೂರು ಭಂಡಾರಮನೆ ಇದರ ಆಶ್ರಯದಲ್ಲಿ ಮೂರನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಾಮಿ ಪ್ರಯುಕ್ತ ಭಂಡಾರಮನೆಯಲ್ಲಿ ನಡೆದ ಮೊಸರುಕುಡಿಕೆ ಉತ್ಸವಕ್ಕೆ ಭಾರತೀಯ ತೀಯಾ ಸಮಾಜ ಉಳ್ಳಾಲ ವಲಯದ ಅಧ್ಯಕ್ಷ ಜಯಂತ್ ಕೊಂಡಾಣ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸುಮಲತಾ ಕೊಣಾಜೆ, ಪುಷ್ಪರಾಜ್ ಶೆಟ್ಟಿ ಪಾವೂರು, ಯೋಗೀಶ್ ಹೆಗ್ಡೆ ತೇಂಬೂರು, ಪ್ರದೀಪ್ ಶೆಟ್ಟಿ ತೇಂಬೂರು, ಸತೀಶ್ ಪೂಜಾರಿ ಪೋಡಾರ್ ಸೈಟ್, ವಿಜಯ ಕುಮಾರ್ ಪಾವೂರು ಭಂಡಾರಮನೆ, ಪ್ರೇಮಾ ಜಯಂತ್ ಪಾವೂರು ಭಂಡಾರಮನೆ , ಪ್ರೇಮ್ ರಾಜ್ ಪಾವೂರು ಉಪಸ್ಥಿತರಿದ್ದರು. ಯುವ ಸಂಗಮದ ಸಂಯೋಜಕ ಪ್ರಜ್ವಲ್ ಭಂಡಾರಮನೆ ಕಾರ್ಯಕ್ರಮ ಸಂಯೋಜಿಸಿದ್ದರು.



