ಮಂಗಳೂರು, ಆ. 25 : ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಆರೋಪಿ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆ. 23 ರ ರಾತ್ರಿ ವೇಳೆ, ಪ್ರಕರಣದ ಸಂತ್ರಸ್ತ ಬಾಲಕಿಯನ್ನು ಕಾರ್ಯಕ್ರಮವೊಂದರಿಂದ ಆಕೆಗೆ ಮನೆಗೆ ಬಿಡುವ ಸಲುವಾಗಿ, ಆರೋಪಿ ಅದ್ದು ಪಡೀಲ್ ಎಂಬಾತನು ತನ್ನ ದ್ವಿಚಕ್ರ ವಾಹನದಲ್ಲಿ ಕರೆತರುತ್ತಾನೆ. ಈ ವೇಳೆ ದಾರಿ ಮಧ್ಯೆ ಅಪ್ರಾಪ್ತ ಬಾಲಕಿಗೆ ಆರೋಪಿಯು ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಸಂತ್ರಸ್ಥ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 46/2026, ಕಲಂ: 75, ಬಿಎನ್ಎಸ್ 2023 ಮತ್ತು ಕಲಂ 8, 12 ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

