ಉಳ್ಳಾಲ :ಕೇರಳದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೆಂಪು ಕಲ್ಲುಗಳನ್ನು ಉಳ್ಳಾಲ ಪೊಲೀಸರು ತಪಾಸಣೆ ಸಂದರ್ಭದಲ್ಲಿ ತಲಪಾಡಿಯಲ್ಲಿ ಪತ್ತೆ ಹಚ್ಚಿದ ಘಟನೆ ಬುಧವಾರ ನಡೆದಿದೆ.

ಪೊಲೀಸರು ತಪಾಸಣೆ ಮಾಡಿದ ಸಂದರ್ಭದಲ್ಲಿ ಲಾರಿಯಲ್ಲಿ 500 ಕೆಂಪು ಕಲ್ಲು ಗಳು ಪತ್ತೆ ಆಗಿವೆ. ಇದರ ಮೌಲ್ಯ 16 ಸಾವಿರ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಈಚರ್ ಲಾರಿಯಲ್ಲಿ ಅಕ್ರಮವಾಗಿ ಕಲ್ಲು ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈಚರ್ ವಾಹನದ ಚಾಲಕ ಅಜೂಬ ಅಬ್ದುಲ್ಲ ನೆಬಾರಿ, ಮಾಲಕ ಸಿರಾಜ್ ಹಾಗೂ ಕೋರೆಯ ಮಾಲಕ ಯಾವುದೇ ಪರವಾನಿಗೆ ಪಡೆಯದೇ ಕಲ್ಲು ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಘಟನೆ ಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಕಲ್ಲು ಮತ್ತು ಈಚರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

