ಉಳ್ಳಾಲ: ಭಾರತ ದೇಶದ ಸಿದ್ಧಾಂತ ನಿರೂಪಿಸುವ ತಿರಂಗಾ ಧ್ವಜವು ತ್ಯಾಗ,ಶಾಂತಿ,ಪ್ರಗತಿಯ ಸಂಕೇತವಾಗಿದೆ.ಇಂತಹ ಧ್ವಜಕ್ಕೆ ಗೌರವ ಸಲ್ಲಿಸುವ ಸಲುವಾಗಿ ಹರ್ ಘರ್ ತಿರಂಗ ಹಾಗೂ ಪ್ರತೀ ವಿದಾನಸಭಾ ಕ್ಷೇತ್ರಗಳಲ್ಲೂ ತಿರಂಗ ಯಾತ್ರೆಯನ್ನು ನಡೆಸುವ ಪರಿಕಲ್ಪನೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಪ್ರೇರಣೆಯಾಗಿದ್ದು ಅವರ ನೇತೃತ್ವದಲ್ಲಿ ಭಾರತವು ವಿಶ್ವಗುರು ಸ್ಥಾನಕ್ಕೇರಲಿದೆಯೆಂದು ಮಾಜಿ ವಿದಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ ಹೇಳಿದರು.

ಎಂಭತ್ತನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಂಗಳೂರು ವಿದಾನಸಭಾ ಕ್ಷೇತ್ರದ ತಿರಂಗಾ ಯಾತ್ರೆ ಸಮಿತಿ ವತಿಯಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದವರೆಗೆ ನಡೆದ ಬೃಹತ್ ತಿರಂಗಾ ಯಾತ್ರೆಯನ್ನುದ್ಧೇಶಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತ್ಯಾಗ,ಬಲಿದಾನ ಮಾಡಿದ್ದು,ಪೋರ್ಚುಗೀಸರನ್ನ ಹಿಮ್ಮೆಟ್ಟಿಸಿದ್ದ ಉಳ್ಳಾಲದ ಕೆಚ್ಚೆದೆಯ ವೀರ ರಾಣಿ ಅಬ್ಬಕ್ಕಳ ಹೋರಾಟವು ಬಹಳ ಸ್ಮರಣೀಯವಾಗಿದೆ.ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶವು ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದು ಅವರ ದಿಟ್ಟ ನಿರ್ಧಾರಗಳನ್ನ ನಾವೆಲ್ಲರೂ ಬೆಂಬಲಿಸಿ ಯಶಸ್ವಿಗೊಳಿಸೋಣವೆಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ, ಆ.13 ರಂದು ಎಲ್ಲರ ಮನೆಯಲ್ಲೂ ತಿರಂಗ ಧ್ವಜವನ್ನು ಹಾರಿಸುವ ಮೂಲಕ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕೆನ್ನುವ ನಿಟ್ಟಿನಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲೂ ತಿರಂಗ ಯಾತ್ರೆಯನ್ನು ನಡೆಸಲಾಗಿದ್ದು,ವಿಕಸಿತ ಭಾರತದ ಪರಿಕಲ್ಪನೆಯ ಸಾಕಾರಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ.ಸುಭದ್ರ ಆಡಳಿತ ನೀಡಿರುವ ಪ್ರಧಾನಿ ಮೋದಿಯವರ ಈ ಸಂಕಲ್ಪವನ್ನ ನಾವೆಲ್ಲರೂ ಯಶಸ್ವಿಗೊಳಿಸೋಣವೆಂದರು.
ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು ಮಾತನಾಡಿದರು.
ಕಾರ್ಗಿಲ್ ಯೋಧರಾದ ಪ್ರವೀಣ್ ಶೆಟ್ಟಿ ಪಿಲಾರು ಅವರು ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಪೂಜಾ ಪೈ,ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ,ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚ ಅಧ್ಯಕ್ಷರಾದ ಮಹೇಶ್ ಜೋಗಿ,ಯುವಮೋರ್ಚ ಜಿಲ್ಲಾ ಉಪಾಧ್ಯಕ್ಷರಾದ ನಿಶಾನ್ ಪೂಜಾರಿ,ಕ್ಷೇತ್ರಾಧ್ಯಕ್ಷ ಮುರಳಿ ಕೊಣಾಜೆ,ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ ಸೋಮೇಶ್ವರ,ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷೆ ಮಾಧವಿ ಉಳ್ಳಾಲ್,ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಶೆಟ್ಟಿ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹರೀಶ್ ಅಂಬ್ಲಮೊಗರು,ಮುಖಂಡರಾದ ಚಂದ್ರಶೇಖರ ಉಚ್ಚಿಲ್,ರವಿ ರೈ ಪಜೀರು,ಯಶವಂತ ಅಮೀನ್,ಜಯಶ್ರೀ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ.ಆರ್ ಸ್ವಾಗತಿಸಿ,ದಯಾನಂದ ತೊಕ್ಕೊಟ್ಟು ವಂದಿಸಿದರು.

