ಬಾಳೆಪುಣಿ: ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ SBS ವಾರ್ಷಿಕ ಸಭೆಯನ್ನು ಉಸ್ತಾದ್ ಹಾರಿಸ್ ಹನೀಫಿಯವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ SBS ನ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ಮುಹ್ಯುದ್ದೀನ್ ಹಾಶಿಂ ಅಧ್ಯಕ್ಷರಾಗಿ, ಮುಹಮ್ಮದ್ ಜಂಶೀರ್ ಕಾರ್ಯದರ್ಶಿಯಾಗಿ ಮತ್ತು ಮಹಮ್ಮದ್ ತಫ್ರೀಹ್ ಖಜಾಂಜಿಯಾಗಿ ಆಯ್ಕೆಯಾದರು.
ಸಲಹಾ ಮಂಡಳಿ ಸದಸ್ಯರಾಗಿ ಹಾರಿಸ್ ಹನೀಫಿ, ಮುಹಮ್ಮದ್ ಮದನಿ ಅಕ್ಬರ್ ಸ್ವಾದಿಕ್ ಸಖಾಫಿ, ಮುದಬ್ಬಿರ್ ಅಬೂಬಕ್ಕರ್ ಸಿದ್ದೀಕ್ ಸಅದಿ ಅಲ್ ಹಾದಿ, ಸಹ ಮುದಬ್ಬಿರ್ ಸಫ್ವಾನ್ ಸಲ್ತಾನಿ ಅಲ್ ಪುರ್ಖಾನಿ ಹಾಗೂ ಹದಿನೈದು ಸದಸ್ಯರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

