Site icon Ullalavani

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಮಾಸಿಕ ಸಭೆ: ನೀಟ್ ಹಗರಣ ಖಂಡನೆ, ರೈತರ ಪರ ಹೋರಾಟಕ್ಕೆ ನಿರ್ಣಯ

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ನವಾಝ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಪ್ರಮುಖ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಸಮಿತಿ ತೀವ್ರವಾಗಿ ಖಂಡಿಸಿದೆ. ಇದರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಂತ-ಹಂತವಾಗಿ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಭಾರತೀಯ ರೈತರ ಹಿತಾಸಕ್ತಿಗೆ ಧಕ್ಕೆ ತರಲಿರುವ ಅಮೇರಿಕಾ ಕೃಷಿ ಒಪ್ಪಂದದ ನೀತಿಗಳ ವಿರುದ್ಧ ಧ್ವನಿ ಎತ್ತಲು ಸಭೆಯಲ್ಲಿ ನಿರ್ಧರಿಸಲಾಗಿದೆ. ದೇಶದ ಬೆನ್ನೆಲುಬಾದ ರೈತರ ರಕ್ಷಣೆಗಾಗಿ ಈ ಒಪ್ಪಂದದ ವಿರುದ್ಧವೂ ವ್ಯಾಪಕ ಜನಾಂದೋಲನ ಮತ್ತು ಸತ್ಯಾಗ್ರಹ ರೂಪಿಸಲು ಯುವ ಕಾಂಗ್ರೆಸ್ ಮುಂದಾಗಿದೆ.

“ಕೇಂದ್ರ ಸರ್ಕಾರದ ತಪ್ಪು ನೀತಿಗಳು ಮತ್ತು ಪರೀಕ್ಷಾ ಮಂಡಳಿಗಳ ಬೇಜವಾಬ್ದಾರಿತನದಿಂದಾಗಿ ಇಂದು ಯುವಜನತೆ ಮತ್ತು ರೈತರು ಬೀದಿಗೆ ಬೀಳುವಂತಾಗಿದೆ. ಅಹಿಂಸಾತ್ಮಕ ಹಾಗೂ ಶಾಂತಿಯುತ ಸತ್ಯಾಗ್ರಹದ ಮಾರ್ಗದ ಮೂಲಕ ನಾವು ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡುತ್ತೇವೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಷೀರ್, ವಿಧಾನ ಸಭಾ ಅಧ್ಯಕ್ಷರಾದ ಹಕೀಮ್ ಕೊಕ್ಕಡ, ನವಾಝ್ ನರಿಂಗಾನ, ಫೈಝಲ್ ಕಡಬ, ಬ್ಲಾಕ್ ಅಧ್ಯಕ್ಷರಾದ ಪ್ರಥ್ವಿರಾಜ್, ಇಮ್ತಿಯಾಜ್ ಕಲ್ಲಡ್ಕ, ಪ್ರತಾಪ್ ಚಂದ್ರ ಕರ್ಕೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹಾಶೀರ್ ಪೆರಿಮಾರ್, ತೇಜಸ್ ಶೆಟ್ಟಿ, ಮಿತೇಶ್, ಫಿರೋಜ್ ಮಲರ್, ಫಯಾಜ್, ರಿತೇಶ್ ಅಂಚನ್, ಬತೀಶ್ ಅತೂರ್,ಯುವ ಕಾಂಗ್ರೆಸ್ ಮುಖಂಡರುಗಳಾದ ಸಮರ್ಥ್ ಭಟ್ ಮತ್ತು ಗೋಪಿ ಉಪಸ್ಥಿತರಿದ್ದರು

Exit mobile version