ಉಳ್ಳಾಲ;ದ.ಕ ಜಿಲ್ಲಾ ಖಾಸಗಿ ಬಸ್ಸಿಗೆ ಸುಮಾರು ವರ್ಷಗಳ ಇತಿಹಾಸವಿದೆ. ಸಾರ್ವಜನಿಕರು 1950 ರಿಂದ 1970ರ ದಶಕದವರೆಗೂ ಬಸಿಗಾಗಿ ಪರದಾಡುತ್ತಿದ್ದರು. ಆದರೆ ಇಂದು ನಿಮಿಷಕ್ಕೊಂದರ0ತೆ ನಮ್ಮ ಜಿಲ್ಲೆಯ ಮೂಲೆ ಮೂಲೆಗೆ, ಹಳ್ಳಿ ಹಳ್ಳಿಗೆ ಬಸ್ ಸಂಚಾರವನ್ನು ಒದಗಿಸಿ ಜಿಲ್ಲೆಯ ಜನರಿಗೆ ಬಸ್ಸು ಸಂಚಾರದ ಚುರುಕನ್ನು ಮುಟ್ಟಿಸಿದ ಸಂಪೂರ್ಣ ಖ್ಯಾತಿ ಜಿಲ್ಲೆಯ ಖಾಸಗಿ ಬಸ್ ಮಾಲಕರಿಗೆ ಸಲ್ಲತ್ತೆ. ಆದರೆ ಇತ್ತಿಚೇಗೆ ಶಕ್ತಿ ಯೋಜನೆ ಮೂಲಕ ಪ್ರೆöÊವೇಟ್ ಬಸ್ ಮಾಲೀಕರಿಗೆ ಹೊಡೆತ ಬಿದ್ದಿದ್ದು, ಅಲ್ಪಸ್ವಲ್ಪ ಆದಾಯಗಳನ್ನು ಗಳಿಸುತ್ತಿದ್ದಾರೆ. ಇದರ ಮಧ್ಯೆ ಬಸ್ ಸೇವೆ ಚೆನ್ನಾಗಿ ಇರುವ ಕಡೆಗಳಲ್ಲಿ ನಿಮಿಷಕ್ಕೊಂದು ಬಸ್ ಓಡಿಸುವ ಮೂಲಕ ಕೆಎಸ್‌ಆರ್‌ಟಿಸಿ ಖಾಸಗಿ ಬಸ್ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಧ್ಯಕ್ಷರಾ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ಕಳವಳ ವ್ಯಕ್ತಪಡಿಸಿದ್ದಾರೆ.

ಅನಾರೋಗ್ಯಕರ ಪೈಪೋಟಿಯಿಂದಾಗಿ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಹಲವು ಭಾಗಗಳಲ್ಲಿ ಬಸ್ ಸೇವೆಗಳು ಸರಿಯಾದ ಸಮಯಕ್ಕಿಲ್ಲ. ಅಂತಹ ಕಡೆಗಳಲ್ಲಿ ಬಸ್ಸ್ ಸೇವೆಗಳನ್ನು ಆರಂಭಿಸಲಿ. ಅದರ ಬದಲು ತೊಕ್ಕೊಟ್ಟು, ತಲಪಾಡಿ, ಭಾಗಗಳಿಗೆ ಅನಗತ್ಯವಾಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದು ಹೀಗೇಯೇ ಮುಂದುವರೆದ ಪಕ್ಷದಲ್ಲಿ ಖಾಸಗಿ ಬಸ್ ಉದ್ಯಮವೇ ನಿಂತು ಹೋಗಲಿದೆ. ಕೆಎಸ್‌ಆರ್‌ಟಿಸಿ ಏಕಸ್ವಾಮ್ಯ ಸಾಧಿಸಿದರೆ ಮತ್ತೆ ಜನರಿಗೆ ಸಮಸ್ಯೆ ಆಗಲಿದೆ.
ಇನ್ನು ಮಂಗಳೂರಿಗೆ ಇ ಬಸ್‌ಗಳನ್ನು ಕೊಡುವುದಾಗಿ ಸರಕಾರ ಹೇಳಿರುವುದು ತಿಳಿದುಬಂದಿದೆ. ಈ ಬಸ್‌ಗಳನ್ನು ದೂರದ ಊರುಗಳಲ್ಲಿ ಬಸ್ ಸೇವೆ ಇಲ್ಲದ ಸ್ಥಳಗಳಲ್ಲಿ ಓಡಿ9ಸಿದರೆ ಒಳಿತು. ಇಲ್ಲವಾದರೆ ಮತ್ತಷ್ಟು ಸಂಕಷ್ಟಕ್ಕೆ ಮಾಲೀಕರು ಗುರಿಯಾಗುತ್ತಾರೆ. ಈಗಾಗಲೇ ಶಕ್ತಿ ಯೋಜನೆಯಿಂದಾಗಿ ಮಹಿಳೆಯರೆಲ್ಲರೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಪ್ರಯಾಣಿಸುತ್ತಾರೆ. ಅವರ ಜೊತೆ ಪುರುಷರು ಇದ್ದರೆ ಅವರೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಹೋಗುತ್ತಾರೆ. ಆದರೆ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗುತ್ತಿದೆ ಆ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ..
ಬಸ್‌ಸ್ಟಾö್ಯಂಡ್ ಗಳು ಸರಿಯಾಗಿ ಇಲ್ಲದ ಕಾರನ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಬೇಕಾಗುತ್ತದೆ. ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತ ಗೂಂಡAಗಡಿಗಳು ಹೆಚ್ಚಾಗಿ ಇರುವುದರಿಂದ ಬಸ್‌ಗಳ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಈ ಸಮಸ್ಯೆಗಳನ್ನು ಮೊದಲು ಮನಪಾ ಪರಿಹರಿಸಲಿ ಎಂದು ಅಝಿಝ್ ಅವರು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮತ್ತು ರೋಷನಿ ನಿಲಯದ ಸಹಯೋಗದಲ್ಲಿ ಬಸ್ ಮಾಲೀಕರ ಸಂಗ ಜ.27ರಂದು ಡ್ರಗ್ಸ್ ವಿರುದ್ಧ ಜಾಗೃತಿ ಅಭಿಯಾನ ಆಯೋಜಿಸಲಿದೆ ಅಂತ ತಿಳಿಸಿದ್ದಾರೆ. ಕೇಂದ್ರ ಬಸ್ ನಿಲ್ದಾಣ, ಲಾಲ್‌ಬಾಗ್, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ ಬಸ್ ನಿಲ್ದಾಣಗಳಲ್ಲಿ ಅಂದು ಬೀದಿ ನಾಟಕ ನಡೆಯಲಿದೆ. ಬಸ್‌ಗಳಲ್ಲಿ ಡ್ರಗ್ಸ್ ದುಷ್ಪರಿಣಾಮಗಳ ಕುರಿತು ಸ್ಟೀಕ್ಕರ್ ಅಂಟಿಸಲಾಗುವುದು ಮತ್ತು ಪ್ರಮುಖ ಕೇಂದ್ರಗಳಲ್ಲಿ ಫ್ಲೇಕ್ಸ್ ಅಳವಡಿಸಲಾಗುವುದು ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ದ.ಕ.ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಉಪಾಧ್ಯಕ್ಷರಾದ ರಾಮಚಂದ್ರ ನಾಯ್ಕ್, , ಜೊತೆ ಕಾರ್ಯದರ್ಶಿ ರಾಜೇಶ್ ಟಿ ಉಪಸ್ಥಿತರಿದ್ದರು.



