ಮಂಗಳೂರು; ಕಾಪಿಕಾಡು ಶ್ರೀ ಉಮಾಮಹೇಶ್ವರಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ತಾಯಿ ಭದ್ರಕಾಳಿ ದೇವಿಯ ಪ್ರತಿಷ್ಠೆಯ ಎಲ್ಲಾ ದೇವತಾ ಕಾರ್ಯಕ್ರಮಗಳ ಸಮಾಲೋಚನೆ ಸಭೆಯು ಬ್ರಹ್ಮಕಲೋಶೋತ್ಸವ ಸಮಿತಿಯ ಅಧ್ಯಕ್ಷರಾದ ಸತೀಶ್ ಕುಂಪಲ ನೇತೃತ್ವದಲ್ಲಿ ಮಂಗಳೂರು ಶರವು ಮಹಾಗಣಪತಿ ದೇವಸ್ಥಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಶಾಸ್ತಿçಗಳ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮೋನಪ್ಪ ಭಂಡಾರಿಯವರನ್ನು ಮಂಗಳೂರು ವಿಭಾಗದ ಹೊರೆಕಾಣಿಕೆಯ ಪ್ರಮುಖರನ್ನಾಗಿ ನೇಮಿಲಾಯಿತು.

ಅವರ ಮಾರ್ಗದರ್ಶನದಂತೆ ಹೊರೆಕಾಣಿಕೆ ಸಮಿತಿ ಕಾರ್ಯ ನಿರ್ವಹಿಸುವುದಾಗಿ ತೀರ್ಮಾನಿಸಿ ಒಂದು ಹೊಸ ತಂಡವನ್ನು ಕೂಡ ರಚಿಸಲಾಯಿತು.
ಸಭೆಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್ ಮಾತಾಡಿ, ಶರವು ದೇವಳದಿಂದ ಶುರುವಾದ ಕಾರ್ಯ ಯಾವುದೇ ವಿಘ್ನವಿಲ್ಲದೇ ನಡೆಯುತ್ತದೆ ಎಂಬ ನಂಬಿಕೆ ಬಲವಾಗಿದೆ. ಈ ನಿಟ್ಟಿನಲ್ಲಿ ಇಂದು ಸಭೆ ನಡೆಯುತ್ತಿದ್ದು, ಹಸಿರು ಹೊರೆಕಾಣಿಕೆಗೆ ಹೆಚ್ಚಾಗಿ ಹಾಳಾಗದಂತಹ ಹೆಚ್ಚು ದಿನ ಬರುವಂತಹ ತರಕಾರಿ, ದಿನಸಿಗಳನ್ನು ನೀಡಿದ್ರೆ ಉತ್ತಮ ಎನ್ನುತ್ತಾ ಕ್ಷೇತ್ರದ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ.
ಇದೇ ವೇಳೆ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಎಲ್ಲರೂ ಒಟ್ಟಾಗಿ ನಿಂತು ಧಾರ್ಮಿಕ ಕಾರ್ಯಕ್ರಮವನ್ನು ನಡೆಸೋಣ. ಶಕ್ತಿಯ ಅನುಸಾರವಾಗಿ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಂತ ಹೇಳಿದ್ರು.
ಇನ್ನು ಈ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸತೀಶ್ ಕುಂಪಲ,ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್ ಹಾಗು ಅವರ ತಂದೆ ಎ ಜಯಣ್ಣ, ಜಗದೀಶ್ ಆಚಾರ್ಯ, ಗಣೇಶ್ ಕಾಪಿಕಾಡ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾಪಿಕಾಡ್, ಹೊರೆಕಾಣಿಕೆ ಅಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಜೀವನ್ ಕುಮಾರ್ ತೊಕ್ಕೊಟ್ಟು ಸೇರಿದಂತೆ ಹಲವರು ಉಪಸ್ಥಿತರಿದ್ದರು.




