ಉಳ್ಳಾಲ: ಮಂತ್ರ ನಾಟ್ಯಕಲಾ ಗುರುಕುಲ (ರಿ.)ಉಳ್ಳಾಲ ಇದರ ಗುರುಕುಲ ಉತ್ಸವ 2026 ತ್ರಯೋದಶ ನಾಟ್ಯ ಸಂಭ್ರಮ ಕಾರ್ಯಕ್ರಮವು ಜ. 17ರ ಶನಿವಾರದಂದು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ಸಭಾ ವೇದಿಕೆ ಕುತ್ತಾರು ಇಲ್ಲಿ ಅಪರಾಹ್ನ 3.00 ಗಂಟೆಗೆ ನಡೆಯಲಿದೆ ಎಂದು ಮಂತ್ರ ನಾಟ್ಯಕಲಾ ಗುರುಕುಲ (ರಿ.)ಉಳ್ಳಾಲ ಇದರ ಅಧ್ಯಕ್ಷರಾದ ಶ್ರಾವಣ್ ಉಳ್ಳಾಲ್ ತಿಳಿಸಿದರು.

ಅವರು ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ದೇವತಾ ದೀಪ ಪ್ರಜ್ವಲನೆಯನ್ನು ಮಂತ್ರ ನಾಟ್ಯಕಲಾ ಗುರುಕುಲ (ರಿ.) ಉಳ್ಳಾಲ ಇದರ ಗೌರವ ಅಧ್ಯಕ್ಷರಾದ ಶಕೀಲ ಜನಾರ್ಧನ ನೆರವೇರಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಲಿದ್ದಾರೆ. ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಕುತ್ತಾರು ಇದರ ಅಧ್ಯಕ್ಷರಾದ ರಾಜೇಶ್ ಅತ್ತಾವರ ಅಧ್ಯಕ್ಷತೆ ವಹಿಸಲಿದ್ದಾರೆ. ಶೃತಿಲಯ ಕಲಾ ಕೇಂದ್ರ ಕುತ್ತಾರು ಹರೀಶ್ ಮಾಸ್ಟರ್, ಕರಾವಳಿ ಕರ್ನಾಟಕ ನೃತ್ಯ ನಿರ್ದೇಶಕರ ಸಂಘ ದ ಅಧ್ಯಕ್ಷರಾದ ಪ್ರಕಾಶ್ ಸಿಂಪೋನಿ, ಜೆ ಸಿ ಇಂಟರ್ನ್ಯಾಷನಲ್ ಸ್ಕೂಲ್ ಕಾರ್ಕಳ ಉಪಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 11 ನೃತ್ಯ ತಂಡಗಳಿAದ ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನಗಳನ್ನೊಳಗೊಂಡ ನಾಟ್ಯ ಮಂತ್ರA ವಿಶೇಷ ನೃತ್ಯ ಸಂಭ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂತ್ರ ನಾಟ್ಯಕಲಾ ಗುರುಕುಲ (ರಿ.)ಉಳ್ಳಾಲ ಇದರ ಕಾರ್ಯದರ್ಶಿ ಕಿರಣ್ ಉಳ್ಳಾಲ್ ಉಪಸ್ಥಿತರಿದ್ದರು.

