ಬಂಟ್ವಾಳ;ಬಿ.ಸಿರೋಡ್-ತಲಪಾಡಿ ಎಂಬಲ್ಲಿ ನಸುಕಿನ ವೇಳೆ ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿಯಾಗಿ ಮಗುಚಿದ ಘಟನೆ ನಡೆದಿದೆ.

ಘಟನೆಯಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಪವರ್ ಸಬ್‌ಸ್ಟೇಶನ್ ಎದುರಲ್ಲೇ ಘಟನೆ ನಡೆದಿದ್ದು, ವಿದ್ಯುತ್ ತಂತಿಗಳು ಹೆದ್ದಾರಿಯಲ್ಲಿ ತುಂಡಾಗಿ ಬಿದ್ದುಕೊಂಡಿದ್ದವು. ಘಟನೆಯಿಂದಾಗಿ ಬಿ.ಸಿ.ರೋಡ್ ಸುತ್ತಮುತ್ತ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

.



