ಮಂಗಳೂರು: ಮಂಗಳೂರು, ರಥಬೀದಿ, ಪುತ್ತುಪ್ರಭುಲೇನ್ನ “ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತ ಬಾಲಾಂಜನೇಯ ಜಿಮ್ನಾಶಿಯಂನ 2024-2025 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಜಿಮ್ನ ಆವರಣದಲ್ಲಿ ನಡೆಯಿತು.

ಮುಂದಿನ 4ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಎ.ಉಮೇಶ್ ಗಟ್ಟಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪರಂದರದಾಸ ಕೂಳೂರು ಮತ್ತು ಎಂ.ಜಯರಾಮ್, ಗೌರವ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಕುದ್ರೋಳಿ, ಜಂಟಿ ಕಾರ್ಯದರ್ಶಿಯಾಗಿ ದೇವದಾಸ ಕೂಳೂರು ಮತ್ತು ಪ್ರದೀಪ್ ಆಚಾರ್ಯ, ಕೋಶಾಧಿಕಾರಿಯಾಗಿ ಮಧುಚಂದ್ರ ಮತ್ತು ವ್ಯವಸ್ಥಾಪಕರಾಗಿ ಮೋಹನರಾಜ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಿ.ಕಮಲಾಕ್ಷ ಅಮೀನ್, ರೋನಾಲ್ಡ್ ಲೋಬೋ, ಮಹಮ್ಮದ್ ಹನೀಫ್ ಕೂಳೂರು, ವೇಣುಗೋಪಾಲ ಕಾಮತ್, ವಿನೋದ್ ರಾಜ್, ತಿಲಕ್ ರಾಜ್, ಸದಾನಂದ ಅಮೀನ್ ಮತ್ತು ವಾಲ್ಟರ್ ಡಿಕೋಸ್ತ ಆಯ್ಕೆಯಾಗಿದ್ದಾರೆ.
ಉತ್ಕೃಷ್ಟ ಸಾಧನೆಗಾಗಿ ” ಬಾಲಾಂಜನೇಯ ರತ್ನ” ಪ್ರಶಸ್ತಿಯನ್ನು ಸದಸ್ಯರಾದ ಬಿ.ಜಯಶೆಟ್ಟಿ ಹಾಗೂ “ಬಾಲಾಂಜನೇಯ ವಜ್ರ” ಪ್ರಶಸ್ತಿ ಪ್ರಕಾಶ್ ವಿನ್ಸೆಂಟ್ ಕಾರ್ಲೊ ಇವರಿಗೆ ನೀಡಿ ಗೌರವಿಸಲಾಯಿತು. ಅಧ್ಯಕ್ಷರಾದ ಎ.ಉಮೇಶ್ ಗಟ್ಟಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿಯವರು ವರದಿ ಮಂಡಿಸಿದರು. ಖಚಾಂಚಿ ಮಧುಚಂದ್ರರವರು ಲೆಕ್ಕಪತ್ರ ಮಂಡಿಸಿದರು. ಜಂಟಿ ಕಾರ್ಯದರ್ಶಿ ದೇವದಾಸ್ ಕೂಳೂರು ಅವರು ಧನ್ಯವಾದ ಸಮರ್ಪಿಸಿದರು.

