ಕಾಪು,ನ.04: ಸಮಾಜದಲ್ಲಿ ಉನ್ನತ ವಿದ್ಯಾಭ್ಯಾಸ ನೀಡುವ ವಿದ್ಯಾ ಕೇಂದರೆಗಳು ಬೆಳೆದು ಬರಬೇಕು. ಎಲ್ಲಾ ತರಹದ ವಿದ್ಯಾರ್ಥಿಗಳು ಅಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಬೇಕು. ಉನ್ನತ ವಿದ್ಯಾಭ್ಯಾಸದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಜಿ ಝಕರಿಯಾ ಜೋಕಟ್ಟೆಯವರು ಅಭಿಪ್ರಾಯಪಟ್ಟಿದ್ದಾರೆ.



ಡಿಕೆಎಸ್ಸಿ ಅಧೀನದಲ್ಲಿ ಅಲ್ ಇಹ್ಸಾನ್ ವಿದ್ಯಾ ಸಮುಚ್ಚಯ ನೀಡಿದ ಭವ್ಯ ಸ್ವಾಗತ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತ ಅಧ್ಯಕ್ಷರಾಗಿ ಆಯ್ಕೆಯಾದ ಜನಾಬ್ ಎಂ.ಎ.ಗಫೂರ್ ಮೂಳೂರು ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಹು ಅಬೂಬಕ್ಕರ್ ಹಾಜಿ ನೇಜಾರ್ ಅವರನ್ನು ಡಿಕೆಎಸ್ಸಿ ವತಿಯಿಂದ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಡಿಕೆಎಸ್ಸಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಕೆ.ಎಚ್.ರಫೀಕ್ ಸೂರಿಂಜೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಮೂಳೂರು, ಸಂಸ್ಥೆಯ ಜನರಲ್ ಮ್ಯಾನೇಜರ್ ಯು.ಕೆ. ಮುಸ್ತಫಾ ಸಅದಿ, ಆಡಳಿತಾಧಿಕಾರಿ ಪ್ರೊ.ಯೂಸುಫ್ ಸುಳ್ಯ ಮಾತಾನಾಡಿದರು.
ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಅಝೀಝ್ ಮೂಳೂರು, ಜಿಲ್ಲಾ ಸಮಿತಿಯ ಮನ್ಸೂರ್ ಕೃಷ್ಣಾಪುರ, ಹಾಜಿ ಫಾರೂಕ್ ಕರ್ನಿರೆ, ಇನಾಸನ್ ಆಡಿಟೋರಿಯಂ ಚೆಯರ್ ಮ್ಯಾನ್ ಸಾದಿಕ್ ದೀನಾರ್, ಹಾಜಿ ಫಾರೂಕ್ ಪೊರ್ಟ್ ವೇ ಹಾಗೂ ಅಲ್ ಇಹ್ಸಾನ್ ಸ್ಕೂಲ್ ಮತ್ತು ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಿಗ್ಗೆ ಡಿಕೆಎಸ್ಸಿ ಅಧೀನದ ಮರ್ಕಝ್ ತಅಲೀಮಿಲ್ ಇಹ್ಸಾನಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ದುಆ ಕಾರ್ಯಕ್ರಮ ನಡೆಯಿತು. ಡಿಕೆಎಸ್ಸಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶಂಶುದ್ದೀನ್ ಬಳ್ಕುಂಜೆ ಸ್ವಾಗತಿಸಿದರು. ಅಲ್ ಇಹ್ಸಾನ್ ಎಜುಕೇಷನ್ ಕೋಡಿನೇಟರ್ ಅನ್ವರ್ ಗೂಡಿನ ಬಳಿ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.



