ಮದಕ : ಉಳ್ಳಾಲ ತಾಲೂಕಿನ ಕುತ್ತಾರು-ಎಲಿಯಾರುಪದವು ರಸ್ತೆ ಅತ್ಯಂತ ಕಿರಿದಾಗಿದ್ದು, ಇಲ್ಲಿನ ಮದಕ ಸಮೀಪದ ಬರುವ ರಸ್ತೆ ಕಿರಿದಾಗಿರುವುದರಿಂದ ಬಸ್ ಚಾಲಕರು ಒಂಚೂರು ಬದಿಗೆ ಕೊಂಡೊಯ್ದರೂ ಹೂತುಹೋಗುವ ದುಸ್ಥಿತಿ ಎದುರಾಗಿದೆ.

ಉಳ್ಳಾಲ ತಾಲೂಕಿನಲ್ಲಿ ಅನೇಕ ಗ್ರಾಮ ಸಂಪರ್ಕ ರಸ್ತೆಗಳು ಕಿರಿದಾದ ಸ್ಥಿತಿಯಲ್ಲಿವೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳ ಅತೀಬುದ್ಧಿವಂತಿಕೆ ಮತ್ತು ಗುತ್ತಿಗೆದಾರರ ಹಣದ ದಾಹದಿಂದ ಗ್ರಾಮೀಣ ಸಾರಿಗೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದರ ಫಲವಾಗಿ ಬಡ ಬಸ್ ಚಾಲಕರು ಮತ್ತು ಮಾಲಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಎರಡು ಕಡೆಯಿಂದ ಬಸ್ ಬಂದಾಗ ಸೈಡ್ ಕೊಡಲು ಸ್ಥಳವೇ ಇಲ್ಲದ ಪರಿಸ್ಥಿತಿಯಲ್ಲಿ ಬಸ್ಸುಗಳು ರಸ್ತೆ ಬದಿಯಲ್ಲಿ ಹೂತುಹೋಗುತ್ತಿವೆ. ಮಳೆಗಾಲದಲ್ಲಿ ಗ್ರಾಮೀಣ ಶಾಲಾ ಮಕ್ಕಳು ಮತ್ತು ನಗರಕ್ಕೆ ಕೆಲಸಕ್ಕೆ ಹೋಗುವ ಜನರ ದುಸ್ಥಿತಿ ಹೇಳತೀರದು. ರಸ್ತೆಯ ಬದಲಾವಣೆಗಿಂತ ರಾಜಕಾರಣಿಗಳು ಹೊಸ ಹೊಸ ವಾಹನಗಳ ಬದಲಾವಣೆಯಲ್ಲೇ ತಲ್ಲೀನರಾಗಿರುವುದು ವಿಷಾದನೀಯ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.

