ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕಾಪಿಕಾಡು: ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಸೇವಾ ಸಮಿತಿಯ ವಾರ್ಷಿಕ ಮಹಾಸಭೆಯು ದಿನೇಶ್ ರೈ ಕಳ್ಳಿಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ದಿನೇಶ್ ರೈ ಕಳ್ಳಿಗೆ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಸುರೇಂದ್ರ ನಾಯಕ್, ನಾರಾಯಣ ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿಯಾಗಿ ವೇಣುಗೋಪಾಲ್, ಉಪಾಧ್ಯಕ್ಷರುಗಳಾಗಿ ಪ್ರವೀಣ್ ಉಳ್ಳಾಲ್ ಬೈಲು, ವಾಮನ್. ಬಿ. ಮೈಂದನ್, ಗೋಪಿನಾಥ್ ಕಾಪಿಕಾಡ್, ಬೇಬಿ ಸುಂದರ್, ಜನಾರ್ಧನ್ ಆಚಾರ್ಯ, ನಾರಾಯಣ ಬಂಗೇರ, ಆಂತರಿಕ ಲೆಕ್ಕ ಪರಿಶೋಧಕರಾಗಿ ಆನಂದ್ ಶೆಟ್ಟಿ ಭಟ್ನಗರ ಮೊದಲಾದವರು ಆಯ್ಕೆಯಾದರು.
ಈ ಸಂದರ್ಭ ದೇವಸ್ಥಾನ ಆಡಳಿತ ಮೊಕ್ತೇಸರ ಎ.ಜೆ. ಶೇಖರ್, ಮೊಕ್ತೇಸರುಗಳಾದ ದಿನೇಶ್ ಅತ್ತಾವರ, ಈಶ್ವರ್ ಉಳ್ಳಾಲ್, ರಘುರಾಮ ಶೆಟ್ಟಿ, ಮಹಾಲಿಂಗ ಉಪಸ್ಥಿತರಿದ್ದರು.


