ಮಂಗಳೂರು: “ಆತ್ಮಶಕ್ತಿ ಸಂಘವು ಒಂದು ನಾಣ್ಯದ ಎರಡು ಮುಖ ಇದ್ದಂತೆ. ಒಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ. ಇನ್ನೊಂದು ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಎಂದು ಆತ್ಮಶಕ್ತಿ ಸಂಘದ ಸದಸ್ಯ ರೊನಾಲ್ಡ್ ಜೋಸೆಫ್ ಸಲ್ದಾನ್ಹ ಶ್ಲಾಘಿಸಿದರು. ಸಂಘವು ನೀಡುತ್ತಿರುವ ಗ್ರಾಹಕ ಸ್ನೇಹಿ ಸೇವೆಯೇ ಸಂಘ ಈ ಮಟ್ಟಕ್ಕ್ಕೆ ಬೆಳೆಯಲು ಮುಖ್ಯ ಕಾರಣ” ಎಂದರು.

ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‍ಬ್ಯಾಂಕ್ ಶಾಖೆಯ ದಶಮನೋತ್ಸವದ ಪ್ರಯುಕ್ತ ಸ್ಟೇಟ್‍ಬ್ಯಾಂಕ್ ಶಾಖೆಯಲ್ಲಿ ನಡೆದ `ಗ್ರಾಹಕರ ಸಭೆ’ಯಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ರೊನಾಲ್ಡ್ ಜೋಸೆಫ್ ಸಲ್ದಾನ್ಹ, ರಂಜಿತ್ ಎಂ, ಹಾಗೂ ಜವಹಾರ್ ಲಾಲ್ ವಿಠಲ್‍ಜೀ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು.
ಸಂಘದ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಎಂ ಮಾತನಾಡಿ “ಆತ್ಮಶಕ್ತಿ ಸಹಕಾರ ಸಂಘವು ನೀಡುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ನೂತನ ಶಾಖೆಯನ್ನು ಬೋಳಾರದಲ್ಲಿ ತೆರೆಯುವಂತೆ ವಿನಂತಿಸಿದರು.
ಸದಸ್ಯ ರಂಜಿತ್ ಮಾತನಾಡಿ “ಸಂಘವು ಇ ಸ್ಟ್ಯಾಂಪ್ ಸೇವೆಯಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಇದರಲ್ಲಿ ಸಂಘದ ಸಿಬ್ಬಂದಿಗಳ ಪಾತ್ರವು ಅತ್ತ್ಯುತ್ತಮವಾಗಿರುವುದರಿಂದ ಸಂಘವು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಆತ್ಮಶಕ್ತಿ ಸಹಕಾರ ಸಂಘವು ಹೀಗೆ ಬೆಳಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಸಂಘದ ಸದಸ್ಯರುಗಳಾದ ರಾಜಾರಾಮ್ ಎ, ಮಾಕ್ಸಿಮ್ ಗೊನ್ಸಾಲ್ವಿಸ್, ಸಿ. ಹೆಚ್ ಪದ್ಮನಾಭ ಶೆಟ್ಟಿ , ಅಬುಬಕ್ಕರ್ ಯೂಸುಫ್ ನಗರ್ ಎಸ್, ಪ್ರಮೋದ್ ಕುಮಾರ್ ಸುವರ್ಣ ಜೆ ಹಾಗೂ ಪ್ರೇಮಲತಾ ಕೆ. ಅಮೀನ್ ಶುಭ ಹಾರೈಸಿದರು.
ವಿಶೇಷ ಸೇವೆ ಲಭ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘದ ಸ್ಟೇಟ್‍ಬ್ಯಾಂಕ್ ಶಾಖೆಯು ದಶಕದ ಸಂಭ್ರಮದೊಂದಿಗೆ ಮುನ್ನಡೆಯುತ್ತಿದೆ. ಈ ಪ್ರಯುಕ್ತ ಸದಸ್ಯ ಗ್ರಾಹಕರಿಗೆ ಚಿನ್ನಾಭರಣಗಳಿಗೆ ಪ್ರತಿ ಗ್ರಾಂ ಗೆ ರೂ. 10,500/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲಗಳನ್ನು ನೀಡುತ್ತಿದ್ದೇವೆ. ಸಂಘದ ಎಲ್ಲಾ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ, ನಮ್ಮ ಸ್ಟೇಟ್‍ಬ್ಯಾಂಕ್ ಶಾಖೆಯ ಡಿ.ಸಿ ಆಫೀಸಿನಲ್ಲಿ ಗ್ರಾಹಕರಿಗೆ ಅನೂಕೂಲವಾಗುವಂತೆ ವ್ಯವಹಾರದ ಸಮಯದಲ್ಲಿ ಇ-ಸ್ಟ್ಯಾಂಪ್ ಸೇವೆಯು ಸಂಜೆ 7 ಗಂಟೆಯವರೆಗೆ ಲಭ್ಯವಿದ್ದು, ಗ್ರಾಹಕರ ಸಂಖ್ಯೆ ಅಧಿಕ ಇದ್ದು ಇಲ್ಲಿ ಸ್ಥಳವಾಕಾಶದ ಕೊರತೆ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಶಾಖೆಯನ್ನು ಮಂಗಳೂರಿನ ಬಂದರು ಸ್ಥಳಕ್ಕೆ ಸ್ಥಳಾಂತರಗೊಳಿಸುವ ಯೋಜನೆಯನ್ನು ಹಮ್ಮಿ ಕೊಂಡಿದ್ದೇವೆ ಎಂದರು.
ಸಂಘವು ಕಳೆದ ಮಾರ್ಚ್ ವರ್ಷಾಂತ್ಯಕ್ಕೆ 182 ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲವನ್ನು ನೀಡಿದೆ. ಈಗಾಗಲೇ ಸಂಘವು ಈ ಸಾಲಿನ ಅರ್ಧ ಆರ್ಥಿಕ ವರ್ಷದಲ್ಲಿ 153 ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲವನ್ನು ವಿತರಿಸಿದ್ದು, ಚಿನ್ನಾಭರಣ ಸಾಲ ನೀಡುವಿಕೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದರು.
ಚಿನ್ನಾಭರಣ ಎಲ್ಲರಿಗೂ ಅಗತ್ಯಕ್ಕೆ ಇರುವಂತಹದು. ಅದರ ಸಾಲ ಸೌಲಭ್ಯವನ್ನು ಕೂಡ ನಾವು ಗ್ರಾಹಕರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ 0% ಸೇವಾಶುಲ್ಕದಲ್ಲಿ ಸಾಲಗಳನ್ನು ನೀಡಿರುತ್ತೇವೆ. ಸಂಸ್ಥೆಯು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತ್ತು ವಾಹನ ವಿಮಾ ಸೌಲಭ್ಯಗಳನ್ನೂ ಕೂಡ ಗ್ರಾಹಕರಿಗೆ ನೀಡುತ್ತಿದೆ. ಸದಸ್ಯರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಶಿಬಿರಗಳನ್ನು ಸತತವಾಗಿ ನಮ್ಮ ಸಂಘ ಹಮ್ಮಿಕೊಂಡು ಬರುತ್ತಿದೆ. ಜೊತೆಗೆ ಸಂಘದ ಸದಸ್ಯರ ಮಕ್ಕಳಿಗೆ ಒಳ್ಳೆಯ ಅಂಕ ಬಂದಾಗ ವಿದ್ಯಾರ್ಥಿ ವೇತನ ನೀಡಿ ಅವರನ್ನು ಪೆÇ್ರೀತ್ಸಾಹಿಸುತ್ತಾ ಬಂದಿದೆ. ಸಂಘದಲ್ಲಿ ಲಭ್ಯವಿರುವ ಪ್ರತಿಯೊಂದು ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಹಾಗೂ ಸಂಘದ ಗಂಜಿಮಠ ಶಾಖೆಯು ಅಕ್ಟೋಬರ್ ತಿಂಗಳ 24 ರಂದು ಗಂಜಿಮಠ ಗ್ರಾಮಪಂಚಾಯತಿ ಕಟ್ಟಡದಿಂದ ಗಂಜಿಮಠ ಮುಖ್ಯ ರಸ್ತೆಯಲ್ಲಿರುವ ವೈಕುಂಠ ಪ್ರಭು ಕಾಂಪ್ಲೆಕ್ಸ್‍ನ ಸುಸಜ್ಜಿತವಾದ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಳ್ಳಲಿದೆ. ಈ ಸಮಾರಂಭಕ್ಕೆ ಎಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕ ಜಿ ಪರಮೇಶ್ವರ ಪೂಜಾರಿ, ರಮಾನಾಥ ಸನಿಲ್, ಗೋಪಾಲ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.
ಸಂಘದ ಸ್ಟೇಟ್‍ಬ್ಯಾಂಕ್ ಶಾಖೆಯ ಸಿಬ್ಬಂದಿಯಾದ ಕುಮಾರಿ ರತಿಕಾ ಸ್ವಾಗತಿಸಿ, ಕುಮಾರಿ ಅನುಜಿತ ವಂದಿಸಿದರು. ಶಾಖಾಧಿಕಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.



