Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
All News

ಖಾಸಗಿ ಬಸ್‌ ಸಿಬ್ಬಂದಿ ಮನಸೂರೆಗೊಂಡ “ರಾಜಲಕ್ಷ್ಮೀ ಚಾಂಪಿಯನ್ಸ್‌ ಟ್ರೋಫಿ”

UllalaVaniBy UllalaVaniSeptember 23, 2025Updated:September 23, 2025No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು : ಬಸ್ ಸಿಬ್ಬಂದಿಗೆ ಒಗ್ಗಟ್ಟನ್ನು ಬೆಳೆಸುವ ನಿಟ್ಟಿನಲ್ಲಿ “ರಾಜಲಕ್ಷ್ಮೀ ಚಾಂಪಿಯನ್ಸ್‌ ಟ್ರೋಫಿ” ಎಂಬ ಕ್ರೀಡಾ ಕೂಟವನ್ನು ಎರಡು ದಿನಗಳ ಕಾಲ ಭವ್ಯವಾಗಿ ಆಯೋಜಿಸಿರುವ ರಾಜಲಕ್ಷ್ಮೀ ಟ್ರಾವೆಲ್ಸ್‌ ಬಸ್‌ ಮಾಲೀಕರ ವಿಭಿನ್ನ ಪ್ರಯತ್ನಕ್ಕೆ ಬಸ್‌ ಸಿಬ್ಬಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನವನ್ನು ಸಾಗಿಸುವಲ್ಲಿ ಖಾಸಗಿ ಬಸ್ಸುಗಳ ಪಾತ್ರ ಅಪಾರ. ಪ್ರತಿಯೊಂದು ಹಳ್ಳಿಗೂ, ಪಟ್ಟಣಕ್ಕೂ, ಮಂಗಳೂರು ನಗರಕ್ಕೂ ಬಸ್‌ಗಳು ಜೀವನಾಡಿಯಂತಿವೆ. ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ, ದಿನನಿತ್ಯದ ಸಂಚಾರ – ಎಲ್ಲವೂ ಬಹುಮಟ್ಟಿಗೆ ಈ ಬಸ್‌ಗಳ ಮೇಲೆ ಅವಲಂಬಿತವಾಗಿದೆ. ಬಸ್ಸಿನ ಚಕ್ರ ತಿರುಗದಿದ್ದರೆ ಅನೇಕರ ಬದುಕೇ ಅಸ್ತವ್ಯಸ್ತವಾಗುತ್ತದೆ ಎಂದು ಹೇಳುವುದು ಅತಿರಂಜಿತವಲ್ಲ.
ಇಂತಹ ಬಸ್ ಸೇವೆಯ ಹಿಂದೆ ಸಾವಿರಾರು ಕುಟುಂಬಗಳ ಬೆವರಿನ ಕಷ್ಟ, ಶ್ರಮ ಮತ್ತು ತ್ಯಾಗ ಅಡಗಿದೆ. ನಿರಂತರ ಒತ್ತಡದ ಕೆಲಸ, ಬೆಳಗ್ಗೆಯಿಂದ ರಾತ್ರಿ ವರೆಗೆ ಹೊರೆ ತುಂಬಿದ ಸೇವೆ, ವಾಹನ ಸಂಚಾರದ ಜಟಿಲತೆ, ಪ್ರಯಾಣಿಕರ ನಿರೀಕ್ಷೆ – ಇವೆಲ್ಲದರ ನಡುವೆ ಬಸ್ ಚಾಲಕರು ಮತ್ತು ನಿರ್ವಾಹಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಳಿವಯಸ್ಸಿನಲ್ಲಿ ಬಿ.ಪಿ., ಶುಗರ್‌ ಮುಂತಾದ ಅನಾರೋಗ್ಯಗಳನ್ನು ಮೈಗೂಡಿಸಿಕೊಂಡವರ ಸಂಖ್ಯೆಯೂ ಕಡಿಮೆ ಇಲ್ಲ. ಈ ಎಲ್ಲಾ ಒತ್ತಡಗಳ ನಡುವೆಯೂ ಅವರು ತಮ್ಮ ಹೊಟ್ಟೆಪಾಡಿಗಾಗಿ ಪ್ರತಿದಿನ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.
ಆದರೆ, ಕೆಲವೊಮ್ಮೆ ಬಸ್‌ ಟೈಮಿಂಗ್‌ ವಿಚಾರಗಳಲ್ಲಿ, ದೈನಂದಿನ ಕಾರ್ಯಪದ್ಧತಿಗಳಲ್ಲಿ ಸಣ್ಣಪುಟ್ಟ ವೈಮನಸ್ಸುಗಳು ಮೂಡಿ ಬರುತ್ತವೆ. ಇಂತಹ ಸಂದರ್ಭಗಳಲ್ಲಿ ಒಗ್ಗಟ್ಟು, ಪರಸ್ಪರ ಗೌರವ ಮತ್ತು ಸಹಕಾರವನ್ನು ಬೆಳೆಸುವುದು ಅತ್ಯವಶ್ಯಕ. “ನಾವು ಎಲ್ಲರೂ ಜಾತಿ-ಧರ್ಮದ ಬೇಧವಿಲ್ಲದೆ, ಬದುಕು ಸಾಗಿಸಲು ದುಡಿಯುವ ಸಹೋದರರು” ಎಂಬ ಭಾವನೆಗೆ ಬಲ ತುಂಬುವ ನಿಟ್ಟಿನಲ್ಲಿ, ಮಂಗಳೂರು ನಗರಕ್ಕೆ ಬರುವ ಅನೇಕ ಬಸ್ಸುಗಳ ಒಡೆಯರಾಗಿರುವ ಹೃದಯವಂತ ರಾಜಲಕ್ಷ್ಮೀ ಬಸ್ಸು ಮಾಲೀಕ ನರೇಶ್‌ ಪೂಜಾರಿ ಮತ್ತು ಅವರ ಪುತ್ರ ಪ್ರತೀಕ್‌ ವಿಭಿನ್ನ ಚಿಂತನೆ ತಂದುಕೊಟ್ಟಿದ್ದಾರೆ.
ಅವರು ಬಸ್ ಸಿಬ್ಬಂದಿಗೆ ಒಗ್ಗಟ್ಟನ್ನು ಬೆಳೆಸುವ ನಿಟ್ಟಿನಲ್ಲಿ “ರಾಜಲಕ್ಷ್ಮೀ ಚಾಂಪಿಯನ್ಸ್‌ ಟ್ರೋಫಿ” ಎಂಬ ಕ್ರೀಡಾ ಕೂಟವನ್ನು ಎರಡು ದಿನಗಳ ಕಾಲ ಭವ್ಯವಾಗಿ ಆಯೋಜಿಸಿದರು. ಈ ಸಂದರ್ಭದಲ್ಲಿ ಬಸ್ ನೌಕರರು ತಮ್ಮ ಕರ್ತವ್ಯ ಒತ್ತಡವನ್ನು ಮರೆತು ಮೈದಾನದಲ್ಲಿ ಬೆವರಿಳಿಸಿದರು, ಕ್ರೀಡೆಯ ಮೂಲಕ ಸ್ನೇಹ, ಬಾಂಧವ್ಯವನ್ನು ಕಟ್ಟಿಕೊಂಡರು.
ಇದಲ್ಲದೆ, ನರೇಶ್ ಪೂಜಾರಿ ಅವರ ಸ್ವಭಾವವೇ ಅಸಾಧಾರಣ. ಅವರು ಕೇವಲ ಬಸ್ ಮಾಲೀಕರಾಗಿಯೇ ನಿಲ್ಲದೇ, ನೌಕರರೊಂದಿಗೆ ತಂಡದ ಜೆರ್ಸಿ ಧರಿಸಿ ಮೈದಾನಕ್ಕಿಳಿದು ಆಟವಾಡಿದರು. “ನಾನು ಕೂಡಾ ನಿಮ್ಮಂತೆಯೇ ಸಾಮಾನ್ಯನೊಬ್ಬ” ಎಂಬ ಸಂದೇಶವನ್ನು ತಮ್ಮ ನಡೆನುಡಿಗಳ ಮೂಲಕ ಹಂಚಿಕೊಂಡರು. ನೌಕರರೊಂದಿಗೆ ಬೆರೆತು ಅವರ ನೋವು–ಸಂತೋಷಗಳಲ್ಲಿ ಪಾಲ್ಗೊಂಡ ಈ ರೀತಿಯ ನಡವಳಿಕೆ ನಿಜಕ್ಕೂ ಪ್ರೇರಣಾದಾಯಕವಾಗಿದೆ.
ರಾಜಲಕ್ಷ್ಮೀ ಬಸ್ಸು ಕುಟುಂಬದ ಈ ಉಪಕ್ರಮವು ಬಸ್‌ ಸಿಬ್ಬಂದಿಯ ಜೀವನದಲ್ಲಿ ಹೊಸ ಉತ್ಸಾಹ ತುಂಬಿದ್ದು, ಪರಸ್ಪರ ಒಗ್ಗಟ್ಟು ಹಾಗೂ ಸ್ನೇಹಾಭಾವವನ್ನು ಗಾಢಗೊಳಿಸಿದೆ. ಮಂಗಳೂರು ಖಾಸಗಿ ಬಸ್‌ ಜಗತ್ತಿನಲ್ಲಿ ಇದು ಮಾದರಿಯ ಉದಾಹರಣೆಯಾಗಿದೆ.

ಪಂದ್ಯಾಟ ಕುರಿತು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ ಮಂಗಳೂರು ಇದರ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ಅಭಿಪ್ರಾಯ ವ್ಯಕ್ತಪಡಿಸಿ, ರಾಜಲಕ್ಷ್ಮಿ ಮಂಗಳಾದೇವಿ ತಂಡದವರ ವತಿಯಿಂದ ಏರ್ಪಡಿಸಿದ ಈ ಎರಡು ದಿನಗಳ ಕ್ರಿಕೆಟ್ ಪಂದ್ಯಕೂಟದಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದು, ಎಲ್ಲಾ ಪಂದ್ಯಗಳು ಅತ್ಯಂತ ಸ್ಫೂರ್ತಿದಾಯಕವಾಗಿ ನಡೆದವು. ಮೊದಲ ದಿನ ನಮ್ಮ ದೇರಳಕಟ್ಟೆ ಅಟ್ಯಾಕರ್ಸ್ ತಂಡವೂ ಕಣಕ್ಕಿಳಿದು ಉತ್ಸಾಹ ತುಂಬಿತು. ಎರಡನೇ ದಿನ ನಮ್ಮ ಪಂದ್ಯವಿಲ್ಲದಿದ್ದರೂ ನಾನು ಹಾಜರಾಗಿ ಎಲ್ಲಾ ತಂಡಗಳ ಜೊತೆಗೆ ಕೂಡಿ ಆನಂದಿಸಿದೆ. ಈ ಕೂಟದಲ್ಲಿ ನನಗೆ ಹೆಚ್ಚು ಮನಸಿಗೆ ಹತ್ತಿದ ಅಂಶ ಎಂದರೆ ರಾಜಲಕ್ಷ್ಮಿ ಬಸ್ಸಿನ ಮಾಲಕರಾದ ನರೇಶ್ ಪೂಜಾರಿ ಅವರ ನಡವಳಿಕೆ. ಬಸ್ ನೌಕರರ ಜೊತೆಗೇ ತಮ್ಮ ತಂಡದ ಜೆರ್ಸಿ ಧರಿಸಿ ಮೈದಾನದಲ್ಲಿ ಓಡಾಡಿ ಬೆರೆತು ಹೋದ ರೀತಿಯು ನಿಜಕ್ಕೂ ಪ್ರೇರಣಾದಾಯಕ. “ನಾನು ಕೂಡಾ ನಿಮ್ಮಂತೆಯೇ ಸಾಮಾನ್ಯನೊಬ್ಬ” ಎನ್ನುವ ಸಂದೇಶವನ್ನು ತಮ್ಮ ನಡೆ-ನುಡಿಗಳ ಮೂಲಕ ಅವರು ಸಾರಿದರು. ಅದರ ಜೊತೆಗೆ ನನ್ನನ್ನು ವೇದಿಕೆಗೆ ಆಹ್ವಾನಿಸಿ, ಬಸ್ ನೌಕರರ ಪರವಾಗಿ ಗೌರವ ಸಲ್ಲಿಸಿದ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದ ಅನುಭವವಾಯಿತು. ಮಾಲಕರಾದ ನರೇಶ್ ಪೂಜಾರಿ, ಅವರ ಪುತ್ರ ಪ್ರತೀಕ್, ಹಾಗೂ ಕುಟುಂಬದ ಇತರೆ ಸದಸ್ಯರು ಇಬ್ಬರು ದಿನಗಳ ಕಾಲ ತಮ್ಮ ಸಮಯ, ಶ್ರಮ, ಮತ್ತು ಹೃದಯವನ್ನೇ ಮುಡಿಪಾಗಿಟ್ಟು ಬಸ್ ನೌಕರರ ಕ್ರೀಡಾ ಕೂಟವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದರು. ನಿಜಕ್ಕೂ ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ. ಬಸ್ ನೌಕರರ ನಡುವಿನ ಸೌಹಾರ್ದ, ಒಗ್ಗಟ್ಟು ಮತ್ತು ಸ್ನೇಹವನ್ನು ಬೆಳೆಸುವಂತಹ ಈ ಕ್ರೀಡಾ ಕೂಟಕ್ಕೆ ರಾಜಲಕ್ಷ್ಮಿ ತಂಡ ನೀಡಿದ ಕೊಡುಗೆ ಅಪಾರ. ಇದು ಕೇವಲ ಕ್ರಿಕೆಟ್ ಪಂದ್ಯವಲ್ಲ; ನೌಕರರ ನಡುವೆ ಕುಟುಂಬದಂತೆ ಬಂಧವನ್ನು ಗಟ್ಟಿಗೊಳಿಸಿದ ಮಹತ್ವದ ಕೂಟ. ಇದೇ ಸಂದರ್ಭದಲ್ಲಿ ಬಸ್ ನೌಕರರೂ, ರಾಜಲಕ್ಷ್ಮಿ ತಂಡದ ನಾಯಕರೂ ಆದ ಶ್ರಜನ್, ಬಶೀರ್ ಹಾಗೂ ಎಲ್ಲಾ ತಂಡದ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು. ಅದೇ ರೀತಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲಾ ತಂಡದ ಆಟಗಾರರನ್ನು ಅಭಿನಂದಿಸುತ್ತೇನೆ. ಇಂತಹ ಹೃದಯಂಗಮ ಕಾರ್ಯಕ್ರಮವನ್ನು ಏರ್ಪಡಿಸಿದ ರಾಜಲಕ್ಷ್ಮಿ ಬಸ್ಸಿನ ಮಾಲಕರಾದ ನರೇಶ್ ಪೂಜಾರಿ, ಅವರ ಪುತ್ರ ಪ್ರತೀಕ್ ಮತ್ತು ಕುಟುಂಬದವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮೀನುಗಾರರ ಬಲೆ, ಪರಿಕರಗಳು ಮುಳುಗಡೆ

March 23, 2026

ಮಂಗಳೂರು CCB ಪೊಲೀಸರ ಕಾರ್ಯಾಚರಣೆ — ತೊಕ್ಕೊಟ್ಟು ಮೂಲದ ಇಬ್ಬರು ಸೇರಿದಂತೆ 3 ಮಂದಿ ಅರೆಸ್ಟ್

March 23, 2026

ಉಡುಪಿ: ಇರಾನ್-ಇಸ್ರೇಲ್ ಸಂಘರ್ಷ, ಎಲ್‌ಪಿಜಿ ಅಭಾವ; ಮೀನುಗಾರಿಕೆ ಉದ್ಯಮಕ್ಕೆ ಭಾರಿ ಹೊಡೆತ….!!

March 23, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025

ಮೀನುಗಾರರ ಬಲೆ, ಪರಿಕರಗಳು ಮುಳುಗಡೆ

By UllalaVaniMarch 23, 20260

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಗಿಲೆಟ್‌ ದೋಣಿಯಲ್ಲಿ ಅವಘಡ ಸಂಭವಿಸಿ, ಮೀನುಗಾರಿಕೆಗಾಗಿ ಬಳಸುತ್ತಿದ್ದ ಬಲೆ ಹಾಗೂ ಇತರ ಪರಿಕರಗಳು ಸಮುದ್ರದಲ್ಲಿ ಮುಳುಗಿ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರು CCB ಪೊಲೀಸರ ಕಾರ್ಯಾಚರಣೆ — ತೊಕ್ಕೊಟ್ಟು ಮೂಲದ ಇಬ್ಬರು ಸೇರಿದಂತೆ 3 ಮಂದಿ ಅರೆಸ್ಟ್

March 23, 2026

ಉಡುಪಿ: ಇರಾನ್-ಇಸ್ರೇಲ್ ಸಂಘರ್ಷ, ಎಲ್‌ಪಿಜಿ ಅಭಾವ; ಮೀನುಗಾರಿಕೆ ಉದ್ಯಮಕ್ಕೆ ಭಾರಿ ಹೊಡೆತ….!!

March 23, 2026

ಪತ್ನಿಯನ್ನು ಕೊಲೆಗೈದು, ಬಳಿಕ ತಾನೂ ಕತ್ತು ಸೀಳಿಕೊಂಡಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರು..!

March 23, 2026
1 2 3 … 1,843 Next
Automatic YouTube Gallery

ಕೀಟನಾಶಕ ಬಳಕೆ ಬಗ್ಗೆ ಎಚ್ಚರಿಕೆ -ಪುಷ್ಪರಾಜ್ ಬಿ.ಎನ್

ಪತ್ರಕರ್ತರ ಸಂಘ, ಫುಡ್ ಚೈನ್ ಕ್ಯಾಂಪೇನ್ ಸೇರಿ ಹಲವು ಸಂಘಗಳ ಸಹಭಾಗಿತ್ವ; ತೊಕ್ಕೊಟ್ಟುವಿನಲ್ಲಿ ಉಚಿತ ಕೈತೋಟ-ತಾರಸಿ ತೋಟ ತರಬೇತಿ ಕಾರ್ಯಕ್ರಮ

ತಾರಸಿ ತೋಟ ನಿರ್ಮಾಣದ ತಾಂತ್ರಿಕ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೀಟನಾಶಕ ಬಳಕೆ ಬಗ್ಗೆ ಎಚ್ಚರಿಕೆ -ಪುಷ್ಪರಾಜ್ ಬಿ.ಎನ್
Now Playing
ಕೀಟನಾಶಕ ಬಳಕೆ ಬಗ್ಗೆ ಎಚ್ಚರಿಕೆ -ಪುಷ್ಪರಾಜ್ ಬಿ.ಎನ್
ಪತ್ರಕರ್ತರ ಸಂಘ, ಫುಡ್ ಚೈನ್ ಕ್ಯಾಂಪೇನ್ ಸೇರಿ ಹಲವು ಸಂಘಗಳ ಸಹಭಾಗಿತ್ವ; ...
ಪತ್ರಕರ್ತರ ಸಂಘ, ಫುಡ್ ಚೈನ್ ಕ್ಯಾಂಪೇನ್ ಸೇರಿ ಹಲವು ಸಂಘಗಳ ಸಹಭಾಗಿತ್ವ; ತೊಕ್ಕೊಟ್ಟುವಿನಲ್ಲಿ ಉಚಿತ ಕೈತೋಟ-ತಾರಸಿ ತೋಟ ತರಬೇತಿ ಕಾರ್ಯಕ್ರಮ

ತಾರಸಿ ತೋಟ ನಿರ್ಮಾಣದ ತಾಂತ್ರಿಕ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅಂತರಾಷ್ಟ್ರೀಯ ಮಾನದಂಡದಲ್ಲಿ ಸ್ಪರ್ಧೆ ಆಯೋಜನೆ- ಕಶಾರ್ಪ್ ಫಿಟ್ನೆಸ್
Now Playing
ಅಂತರಾಷ್ಟ್ರೀಯ ಮಾನದಂಡದಲ್ಲಿ ಸ್ಪರ್ಧೆ ಆಯೋಜನೆ- ಕಶಾರ್ಪ್ ಫಿಟ್ನೆಸ್
ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ;ಮಾ.24ರಿಂದ ...
ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ;ಮಾ.24ರಿಂದ ಟಿವಿ ರಮಣ ಪೈ ಸಭಾಂಗಣದಲ್ಲಿ 5 ದಿನಗಳ ಕ್ರೀಡಾಕೂಟ

ಚಾಂಪಿಯನ್‌ಶಿಪ್ ನಿರ್ದೇಶಕರಾದ ಸತೀಶ್ ಕುಮಾರ್ ಕುದ್ರೋಳಿ ಮಾಹಿತಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d