ಸಂಕೊಳಿಗೆ : ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಅಭ್ಯಾಸದ ಆಸಕ್ತರಿಗೆ ಸಂತಸದ ಸುದ್ದಿಯಾಗಿದೆ! ಉಚ್ಚಿಲ ಸಂಕೊಳಿಗೆಯಲ್ಲಿ ‘ಶಿವ ಗಣೇಶ್ ಸಂಗೀತ ವಿದ್ಯಾಲಯ’ ತನ್ನ ಸಂಗೀತ ತರಗತಿಗಳನ್ನು ಪ್ರಾರಂಭಿಸುತ್ತಿದ್ದು, ಕಲಿಕೆಗೆ ಆಸಕ್ತಿ ಹೊಂದಿರುವ ಎಲ್ಲಾ ವಯೋಮಿತಿಯ ವಿದ್ಯಾರ್ಥಿಗಳನ್ನು ಸಂಗೀತ ಪಯಣದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಈ ಸಂಗೀತ ತರಗತಿಗಳನ್ನು ಸಂಗೀತ ವಿದ್ಯಾರ್ಥಿಗಳಿಗೆ ಅನುಭವಯುಕ್ತ ಮಾರ್ಗದರ್ಶನ ನೀಡುವ ಶಶಿಕಲಾ ಪ್ರಭು ಕಾಡುಮಠ ಅವರ ನೇತೃತ್ವದಲ್ಲಿ ನಡೆಸಲಾಗುತ್ತದೆ. ತಾಳ-ಲಯ-ರಾಗಗಳ ಸುಂದರ ಜಗತ್ತಿಗೆ ಪ್ರವೇಶಿಸಲು, ಸಂಗೀತ ಕಲಿಕೆ ಪ್ರಾರಂಭಿಸಲು ಇಚ್ಛಿಸುವ ಎಲ್ಲರಿಗೂ ಇದು ಸುವರ್ಣಾವಕಾಶ.
ತರಗತಿಯ ಸ್ಥಳ:
ಭಗವತಿ ಶಾಲೆಯ ಹತ್ತಿರ, ಸುನಿಲ್ ಉಚ್ಚಿಲ ಅವರ ನಿವಾಸದಲ್ಲಿ ಈ ತರಗತಿಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಆರಾಮದಾಯಕ ಹಾಗೂ ಶ್ರದ್ಧೆಯಿಂದ ಕಲಿಯಬಹುದಾದ ವಾತಾವರಣ ಒದಗಿಸಲಾಗುತ್ತದೆ.
ಪ್ರವೇಶಾತಿ ಹಾಗೂ ಸಂಪರ್ಕ:
9481141379, 9845289104
ಇವರುಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.


