ಉಳ್ಳಾಲ: ಪ್ರಧಾನಿ ನರೇಂದ್ರ ಮೋದಿ ಅವರ 74 ನೇ ಹುಟ್ಟುಹಬ್ಬದ ಪ್ರಯುಕ್ತ ಮಂಗಳೂರು ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಉಳ್ಳಾಲ ಶ್ರೀ ಚೀರುಂಭ ಭಗವತೀ ದೇವಸ್ಥಾನದಲ್ಲಿ ದೇವಿಗೆ ಅಲಂಕಾರ ಪೂಜೆ ಸಲ್ಲಿಸಿ ಸಧೃಡ ಆರೋಗ್ಯ, ದೀರ್ಘ ಆಯುಷ್ಯ ಹಾಗೂ ದೇಶ ಸುಭಿಕ್ಷೆಯಲ್ಲಿರುವಂತೆ ಪ್ರಾರ್ಥಿಸಲಾಯಿತು.


ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಶೋಕ್ ಬಾಡಿ, ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸೋಮೇಶ್ವರ ಮಹಾ ಶಕ್ತಿಕೇಂದ್ರ ಅಧ್ಯಕ್ಷ ಪುರುಷೋತ್ತಮಗಟ್ಟಿ ಕೊಲ್ಯ, ಕಾರ್ಯದರ್ಶಿ ಅರುಣ್ ಬೀರಿ, ಸೋಮೇಶ್ವರ ಪುರಸಭೆ ಸದಸ್ಯರಾದ ಸೋನಾ ಸುಭಾಷಿಣಿ, ವಸಂತ್ ಉಳ್ಳಾಲ ಹಾಗೂ ಹರೀಶ್ ಧರ್ಮನಗರ ಉಪಸ್ಥಿತರಿದ್ದರು


