
ಉಳ್ಳಾಲ: ಶವಸ್ನಾನವನ್ನು ಗೌರವಪೂರ್ವಕವಾಗಿ ನಡೆಸುವ ಉದ್ದೇಶದಿಂದ ಮಾನವೀಯತೆಯ ನೆರಳಾಗಿರುವ ಮಾರುತಿ ಜನಸೇವಾ ಸಂಘ (ರಿ.) ಉಳ್ಳಾಲ ವೈಜ್ಞಾನಿಕವಾಗಿ ಚಿಂತಿಸಿ ಶವಸ್ನಾನದ ಟೆಂಟ್ ಮತ್ತು ಶವಮಲಗಿಸುವ ಟೇಬಲ್ ರೂಪದ ಬಾಕ್ಸನ್ನು ನೀಡುವ ಮೂಲಕ ಉತ್ತಮ ಹೆಜ್ಜೆಯನ್ನು ಇರಿಸಿದ್ದಾರೆ ಎಂದು ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಯಶವಂತ್ ಅಮೀನ್ ಹೇಳಿದ್ದಾರೆ.
ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮಾರುತಿ ಜನಸೇವಾ ಸಂಘದ ವತಿಯಿಂದ ಮೊಗವೀರ ಸಮಾಜಕ್ಕೆ ಶವಸ್ನಾನ ಪೆಟ್ಟಿಗೆಯ ಲೋಕಾರ್ಪಣೆಗೊಳಿಸುವ ಸಾಂಕೇತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಾರ್ಥೀವ ಶರೀರವನ್ನು ಶುಚಿಗೊಳಿಸಲು ಸೀರೆ, ಕಂಬಳಿಗಳನ್ನು ಇರಿಸಿಕೊಂಡು ಬೇರೆ ಜನರಿಗೆ ಕಾಣದ ಹಾಗೆ ಶವಸ್ನಾನ ನಡೆಸುವುದು ಹಲವರಿಗೆ ಮುಜುಗರವನ್ನು ತರಿಸುವ ಸನ್ನಿವೇಶಗಳಾಗಿತ್ತು. ಈ ಪರಿಸ್ಥಿತಿಯನ್ನು ಕೂಲಂಕುಷವಾಗಿ ಗಣನೆಗೆ ತೆಗೆದುಕೊಂಡ ಮಾರುತಿ ಯುವಕ ಮಂಡಲದ ಸದಸ್ಯರು ಇಲ್ಲಿ ವೈಜ್ಞಾನಿಕ ವಿಚಾರಗಳನ್ನು ಮಾಡಬೇಕೆಂದು ಸದಸ್ಯರೆಲ್ಲರೂ ಒಟ್ಟಾಗಿ
ಚಪ್ಪರದ ರೀತಿಯಲ್ಲಿ ಪಾರ್ಥೀವ ಶರೀರದ ಶುಚಿತ್ವದ ಕಾರ್ಯಕ್ಕೆ ಟೆಂಟ್ ರಚಿಸಿ , ಶವ ಮಲಗಿಸಲು ಟೇಬಲ್ ರೀತಿಯ ಬಾಕ್ಸನ್ನು ರಚಿಸಿ ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ ಮುಂದಿನ ಯೋಜನೆಗಳಾಗಿ ರೂ.25 ಲಕ್ಷದ ವೆಚ್ಚದಲ್ಲಿ ಸಿಬಿನೆಟ್ ಕ್ಷಯರೋಗದ ಸಾಧನವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಿರುವ ಸಂಸ್ಥೆ, ಸಂಘಕ್ಕೆ 40 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ 5 ಬಡ ಕುಟುಂಬಸ್ಥÀರಿಗೆ ಮನೆ ಕಟ್ಟುವ ಯೋಜನೆಯನ್ನು ರೂಪಿಸಿದ್ದಾರೆ. ಇವರ ಸೇವೆಯನ್ನು ಮನಗಂಡು ಮುಂದೆ ರಾಷ್ಟ್ರೀಯ ಪ್ರಶಸ್ತಿಯೂ ಸಂಘವನ್ನು ಅರಸಿಕೊಂಡು ಬರಲಿ ಎಂದು ಹಾರೈಸಿದರು.
ಈ ಸಂದರ್ಭ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ಪುತ್ರನ್, ಗುರಿಕಾರ ಹಾಗೂ ಮಧ್ಯಸ್ಥರಾದ ಗಂಗಾಧರ್ ಸುವರ್ಣ, ಮೊಗವೀರ ಸಮಾಜದ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಗೇರ, ಮಾರುತಿ ಯುವಕ ಮಂಡಲದ ಗೌರವಾಧ್ಯಕ್ಷ ವರದರಾಜ್ ಬಂಗೇರ, ಅಧ್ಯಕ್ಷ ಸಂದೀಪ್ ಪುತ್ರನ್, ಪ್ರಧಾನ ಸಂಚಾಲಕ ಸುಧೀರ್ ಬಿ.ಅಮೀನ್, ಉಪಾಧ್ಯಕ್ಷ ಪ್ರಶಾಂತ್ ಬಿ. ಉಳ್ಳಾಲ್, ಕೋಶಾಧಿಕಾರಿ ಅನಿಲ್ ಚರಣ್, ದಿನೇಶ್ ಕರ್ಕೇರ, ಸುಧೀರ್ ಸುವರ್ಣ , ಹರೀಶ್ ಪುತ್ರನ್, ಪ್ರಕಾಶ್ ತಿಂಗಳಾಯ, ಅಜಿತ್ ಸುವರ್ಣ, ಕಿರಣ್ ಪುತ್ರನ್, ರಂಜಿತ್ ಬಂಗೇರ, ವರುಣ್ ಉಳ್ಳಾಲ್ ಸೇರಿದಂತೆ ಮೊಗವೀರ ಸಮಾಜದ ಗುರಿಕಾರ ವೃಂದದವರು, ಆಡಳಿತ ಸಮಿತಿ ಸದಸ್ಯರುು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕಪಿಲ್ ಎಸ್.ಬಂಗೇರ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.
`5 ಬಡ ಕುಟುಂಬಗಳಿಗೆ ಮನೆ ನಿರ್ಮಾಣದ ಯೋಜನೆ : ಸಂದೀಪ್ ಪುತ್ರನ್
ಮೊಗವೀರ ಸಂWಕ್ಕೆ 40 ವರ್ಷಗಳಾಗುವ ಸಂದರ್ಭದಲ್ಲಿ ಅನೇಕ ಸಮಾಜಮುಖಿ ಯೋಜನೆಗಳನ್ನು ಸಂಘ ಹಮ್ಮಿಕೊಂಡಿದೆ. ಕಳೆದ ವರ್ಷ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ಬಾರಿ 40 ವರ್ಷಗಳನ್ನು ಪೂರೈಸುವ ಹಿನ್ನೆಲೆಯಲ್ಲಿ 5 ಬಡ ಕುಟುಂಬಸ್ಥರಿಗೆ ಮನೆ ರಚನೆ, ಲಕ್ಷಾಂತರ ವೆಚ್ಚದ ಕ್ಷಯರೋಗ ಪತ್ತೆಹಚ್ಚುವ ಸಾಧನವನ್ನು ಕೊಡುಗೆಯಾಗಿ ಜಿಲ್ಲಾ ಆಸ್ಪತ್ರೆಗೆ ಸಂಘ ನೀಡಲಿದೆ. ಇದೇ ಬರುವ ಸೆ.21 ರಂದು ಉಳ್ಳಾಲ ತಾಲೂಕು ಮಟ್ಟದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜಸೇವಕರಿಗೆ ಸನ್ಮಾನ, ದೈವ ನರ್ತಕರಿಗೆ, ಅರ್ಚಕರಿಗೆ ಗೌರವ ನೀಡುವ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಅಧಿಕೃತವಾಗಿ ಶವಸ್ನಾನ ಪೆಟ್ಟಿಗೆಯನ್ನು ಲೋಕಾರ್ಪಣೆಗೊಳಿಸಲಿದ್ದೇವೆ.
ಸಂದೀಪ್ ಪುತ್ರನ್
ಅಧ್ಯಕ್ಷರು
ಮಾರುತಿ ಯುವಕ ಮಂಡಲ
ಮೊಗವೀರಪಟ್ನ ಉಳ್ಳಾಲ

