ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಬಂಟ್ವಾಳ ತಾಲೂಕಿನ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಹಾಗೂ ಪತಂಜಲಿ ಯೋಗ ಸಮಿತಿ ಮುಡಿಪಿನ ಜಂಟಿ ಆಶ್ರಯದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಸಾಂಸ್ಕ ೃತಿಕ ಭವನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಯೋಗ ಶಿಬಿರ ಸಮಾರೋಪ ಭಾನುವಾರ ನಡೆಯಿತು.
ಸಮಾರೋಪದಲ್ಲಿ ಮಾತನಾಡಿದ ಆಯುರ್ವೇದ ತಜ್ಞ ಮಂಗಳೂರಿನ ಡಾ. e್ಞÁನೇಶ್ ನಾಯಕ್ ಮನುಷ್ಯನಿಗೆ ಬದುಕುವುದಕ್ಕಾಗಿ ಆಹಾರ ಅನಿವಾರ್ಯ. ಬದುಕುವುದಕ್ಕಾಗಿ ಮಾತ್ರ ಆಹಾರ ಸೇವನೆ ಮಾಡಬೇಕು ಹಾಗೂ ಆಹಾರ ಮಿತ ಪ್ರಮಾಣದಲ್ಲಿದ್ದದರೆ ಮಾತ್ರ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂಬ ಅರಿವು ನಮ್ಮಲ್ಲಿರಬೇಕು ಎಂದು ನುಡಿದರು.
ಪ್ರತಿಯೊಬ್ಬರು ಬದುಕಿನ ಬಗ್ಗೆ ಕೆಲವೊಂದು ನಿರೀಕ್ಷೆ ಇಟ್ಟುಕೊಮಡಿರುತ್ತಾರೆ. ಆ ನಿರೀಕ್ಷೆಗೆ ತಕ್ಕಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾದರೆ ನಮಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮುಖ್ಯ. ಯೋಗ ಉತ್ತಮ ಬದುಕಿನ ದಾರಿಯನ್ನು ಹೇಳಿಕೊಡುತ್ತದೆ ಎಂದರು.
ಆರೋಗ್ಯವನ್ನು ಕಾಪಡಿಕೊಳ್ಳುವಲ್ಲಿ ಯೋಗ ಯಾವ ರೀತಿಯ ಪಾತ್ರ ವಹಿಸಿದೆ ಎಂಬುವುದು ಇಡೀ ವಿಶ್ವವೇ ಅರಿತುಕೊಂಡಿದೆ ಎಂದು ತಿಳಿಸಿದ ಅವರು ಮನುಷ್ಯನ ದೇಹದ ಪ್ರತಿಯೊಂದು ಆಂಗಾಗಳ ಬಗ್ಗೆ ಮಾಹಿತಿ ನೀಡಿ, ಆಹಾರ ಸೇವನೆ ಕ್ರಮ, ನಿತ್ಯಕರ್ಮಗಳು, ಯೋಗ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಯಾವ ರೀತಿಯ ಪಾತ್ರ ವಹಿಸುತ್ತದೆ ಎಂಬುದನ್ನು ವಿವರಿಸಿದರು.
ಸಮಾರೋಪದಲ್ಲಿ ಸಿದ್ಧ ಸಮಾ„ ಯೋಗದ ಗುರೂಜಿ ಮಾಧವ ಗುರೂಜಿ, ಯೋಗ ಗುರು ಪ್ರದೀಪ್ ಶೆಟ್ಟಿ ಮುಡಿಪು, ಪ್ರಕಾಶ್ ಆಚಾರ್ಯ ಮುಡಿಪು, ಪ್ರಭಾಕರ್ ಆಚಾರ್ಯ ಬೋಳಿಯಾರು, ಸುರೇಶ್ ಮುಡಿಪು ಹಾಗೂ ಬೇಬಿರಾಜ್ ಮುಡಿಪು ಉಪಸ್ಥಿತರಿದ್ದರು.
ಯಕ್ಷಗಾನ ಸಂಘದ ಅಧ್ಯಕ್ಷ ಕೆ. ನಾರಾಯಣ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಸೇರಿದಂತೆ 25ಶಿಬಿರಾರ್ಥಿಗಳು ಯೋಗ ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಾರ್ಯದರ್ಶಿ ಚಂದ್ರಹಾಸ ಕಣಂತೂರು ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಆಚಾರ್ಯ ಕೈರಂಗಳ ವಂದಿಸಿದರು.


