ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: 1947ರ ಸ್ವಾತಂತ್ರ್ಯ ಕೇವಲ ರಾಜಕೀಯ ಸ್ವಾತಂತ್ರ್ಯವಾಗಿದ್ದು, ಈ ವೇಳೆ ಇಬ್ಭಾಗಗೊಂಡ ದೇಶದಿಂದಾಗಿ ಇದೀಗ ಭಾರತ ಅಪಾಯವನ್ನು ಎದುರಿಸುವಂತಾಗಿದೆ ಎಂದು ಯುವಬ್ರಿಗೇಡ್ ನ ಕೃಷ್ಣ ಉಪಾಧ್ಯಾಯ ಹೇಳಿದ್ದಾರೆ.
ಯುವ ಬ್ರಿಗೇಡ್ ಉಳ್ಳಾಲ ಇದರ ವತಿಯಿಂದ ತೊಕ್ಕೊಟ್ಟು ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಜರಗಿದ ಕಾರ್ಗಿಲ್ ವಿಜಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.




ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸಾವಿನಿಂದಾಗಿ ದೇಶ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದ ಕಲಾಂ ಅವರು ದೇಶದ ಸಂಪತ್ತಾಗಿದ್ದರು. ದೇಶ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಪಡೆದುಕೊಂಡಿದೆ. ಆ ವೇಳೆ ನಡೆದ ಇಭ್ಭಾಗದ ಫಲವಾಗಿ ಕಾರ್ಗಿಲ್‍ಗಾಗಿ ಸೈನಿಕರು ಹೋರಾಡಿ ಪ್ರಾಣಬಲಿ ಕೊಟ್ಟು ಉಳಿಸಬೇಕಾದ ಸ್ಥಿತಿ ನಿರ್ಮಾಣವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ವಿಶ್ವನಾಥ ಗಟ್ಟಿ, ನಿವೃತ್ತ ಸೇನಾನಿಗಳಾದ ಸುಧಾಕರ್ ಕುಂಪಲ, ವೆಂಕಟೇಶ್ ಕುಂಪಲ ಹಾಗೂ ಅನಿಲ್ ಕುಮಾರ್ ಕುಂಪಲ, ಅಶೋಕ್ ಕುಮಾರ್ ಕುಂಪಲ, ಪ್ರವೀಣ್ ಶೆಟ್ಟಿ ಪಿಲಾರ್, ರಮೇಶ್ ಕುಂಪಲ, ರವಿಚಂದ್ರ ಗಟ್ಟಿ ಕೋಟೆಕಾರು, ಸದಾಶಿವ ಗಟ್ಟಿ ಕೋಟೆಕಾರು ಉಪಸ್ಥಿತರಿದ್ದರು.
ನಾರಾಯಣ ಕುಂಪಲ ಸ್ವಾಗತಿಸಿದರು. ಆಶಿಕ್ ಮಾಡೂರು ಕಾರ್ಯಕ್ರಮ ನಿರ್ವಹಿಸಿದರು. ಸಾಗರ್ ಕೆ.ಪಿ ಮಾಡೂರು ವಂದಿಸಿದರು.











