ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಬಂಟರ ಸಂಘ ಉಳ್ಳಾಲ ವಲಯ ಇದರ ಮಹಿಳಾ “ಸಿರಿ ಸ್ವ-ಸಹಾಯ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾಗಿ ನಿಶಾ ಶೆಟ್ಟಿ ನೀಲಿಪಾಲ್ ಆಯ್ಕೆಯಾಗಿದ್ದಾರೆ.
ಒಕ್ಕೂಟದ ಸಹಾಯಕ ಕಾರ್ಯ ನಿರ್ವಾಹಕ ನಿರ್ದೇಶಕಿಯಾಗಿ ಶಾರದಾ ಎಚ್. ಶೆಟ್ಟಿ ಉಳ್ಳಾಲ, ನಿರ್ದೇಶಕರಾಗಿ ಸುಜಾತ ಎಸ್. ಶೆಟ್ಟಿ ಪೆರ್ಮನ್ನೂರು, ಮಲ್ಲಿಕಾ ಎಸ್. ಭಂಡಾರಿ, ಶಶಿಕಲಾ ಎ. ಶೆಟ್ಟಿ, ಲೆಕ್ಕಪರಿಶೋಧಕರಾಗಿ ವಿದ್ಯಾ ಪಿ. ಶೆಟ್ಟಿ, ಸುರೇಶ್ ಶೆಟ್ಟಿ ಅಂಬ್ಲಮೊಗರು ಇವರನ್ನು ಆಯ್ಕೆಮಾಡಲಾಯಿತು.
ಈ ಸಂದರ್ಭ ವಲಯದ ಪ್ರತಿನಿಧಿಗಳಾಗಿ ವಲಯಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಹಾಗೂ ವಲಯದ ಪ್ರಧಾನ ಕಾರ್ಯದರ್ಶಿ ಆನಂದ ಎನ್. ಶೆಟ್ಟಿ,ಯವರ ಉಪಸ್ಥಿತರಿದ್ದರು.


