UN networks
ಉಳ್ಳಾಲ: ಬಿಜೆಪಿಯವರ ಅಪಪ್ರಚಾರದ ತಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಎದ್ದು ನಿಂತು ಹೋರಾಡಬೇಕು. ಚುನಾವಣೆ ಬರುವವರೆಗೂ ಕಾಯದೇ, ಈಗಿನಿಂದಲೇ ತಯಾರಾಗುವ ವಿಚಾರಗಳಾಗಲಿ. ವೋಟರ್ ಲಿಸ್ಟ್ ಸರಿಯಾಗಿದ್ದಲ್ಲಿ ಅಲ್ಲಿ ಯಶಸ್ವೀ ಕಾರ್ಯನಿರ್ವಹಿಸಲು ಸಾಧ್ಯ. ಡಿಲೀಷನ್ ಲಿಸ್ಟ್ ನಲ್ಲಿ ಇರುವಂತಹ ಹೆಸರುಗಳನ್ನು ಕೌಂಟರ್ ಚೆಕ್ ಮಾಡಬೇಕಿದೆ ಎಂದು ವಿಪಕ್ಷ ಉಪನಾಯಕ ಹಾಗೂ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.


ಅವರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮಂಗಳೂರು ವಿಧಾನಸಭಾ ಕ್ಷೇತ್ರ, ಮುಡಿಪು ಬ್ಲಾಕ್ ಮತ್ತು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಇದರ ಆಶ್ರಯದಲ್ಲಿ ಮುಡಿಪು ಹೂಹಾಕುವಕಲ್ಲು ಖಾಸಗಿ ಸಭಾಂಗಣದಲ್ಲಿ ಬುಧವಾರ ಜರಗಿದ ಪಕ್ಷ ಸಂಘಟನೆಯ ಕುರಿತು ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
200 ಮನೆಗಳಿಗೆ ಒಂದು ಬೂತ್ ಇದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮತದಾರರ ಪಟ್ಟಿಯ ಪರಿಷ್ಕರಣೆ ಬೂತ್ ಕಾರ್ಯಕರ್ತರು ಮಾಡಬೇಕಿದೆ. 18 ವರ್ಷ ಮೇಲ್ಪಟ್ಟವರಿಗೆ ಎಲ್ಲರಿಗೂ ಮತದಾನ ಮಾಡುವ ಅವಕಾಶ ಕಲ್ಪಿಸಬೇಕು. ಜನವರಿ, ಫೆಬ್ರವರಿ, ಮಾಚ್೯ ವರೆಗೂ 18 ವರ್ಷಗಳಾದವರನ್ನು ಮತದಾನದ ಹಕ್ಕು ಒದಗಿಸಲು ಸಾಧ್ಯ. ಅವರನ್ನು ದೂರವಾಣಿ ಮೂಲಕ ಸಂಪರ್ಕದಲ್ಲಿಟ್ಟುಕೊಂಡು ಸೇರಿಸುವ ಕಾರ್ಯವಾಗಬೇಕು. ಮಾಧ್ಯಮ ಗಳನ್ನು ನೋಡಿಕೊಂಡು ಮನೆಯಲ್ಲೇ ಉಳಿಯುವವರು ಅನೇಕರಿದ್ದಾರೆ, ಅವರನ್ನು ಜಾಗೃತಿಗೊಳಿಸುವ ಕಾರ್ಯಗಳಾಗಬೇಕು. ಗ್ರಾಮದ ಹಿರಿಯ ನಾಯಕರು ಪಕ್ಷದ ಕುರಿತು ಮುತುವರ್ಜಿ ವಹಿಸದೇ ಇದ್ದಲ್ಲಿ ಬೂತ್ ಕಾರ್ಯಕರ್ತರು ಕಾಳಜಿ ವಹಿಸುವುದಿಲ್ಲ. ಪಕ್ಷದ ಕಾರ್ಯಕತರು ಸ್ವಪ್ರತಿಷ್ಠೆಯನ್ನು ಬಿಟ್ಟು ಪ್ರಾಮಾಣಿಕ, ಬದ್ಧತೆ, ಸಹೋದರತೆ, ಪ್ರೀತಿ ವಿಶ್ವಾಸದಿಂದ ಪಕ್ಷದ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ದ್ವೇಷದ ರಾಜಕಾರಣ ಪಕ್ಷದ ಸಿದ್ಧಾಂತವಲ್ಲ, ಪ್ರೀತಿ ವಿಶ್ವಾಸದ ಕೆಲಸವೇ ಪಕ್ಷಕ್ಕೆ ಪ್ರೇರಣೆ. ವಿಡಂಬನಾತ್ಮಕವಾಗಿ ನಡೆದುಕೊಳ್ಳದೆ ಒಗ್ಗಟ್ಟಾಗಿ ನಡೆದುಕೊಳ್ಳುವ ಕಾರ್ಯಗಳಾಗಲಿ ಎಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ ಮಾತನಾಡಿ, ಪಂಚಾಯತ್ ರಾಜ್ ಹಾಗೂ ಪಕ್ಷ ಒಂದೇ ಆಗಿರುತ್ತದೆ. ಪಂಚಾಯತ್ ರಾಜ್ ಹಕ್ಕುಗಳಿಗೆ ಚ್ಯುತಿಯಾದಾಗ ಉಳ್ಳಾಲದಿಂದ ಆರಂಭ ಕಂಡ ಹೋರಾಟ ರಾಜ್ಯಕ್ಕೆ ವ್ಯಾಪಿಸಿತ್ತು. 15,000 ಮತದಾರರ ಡಿಲೀಷನ್ ಮಾಡಿರುವುದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ನಡೆಸಿರುವ ಷಡ್ಯಂತ್ರ. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಗಳಾಗದಂತೆ ನೋಡುವುದು ಪ್ರತಿಯೊಬ್ಬರ ಜವಾಬ್ದಾರಿ. ಚುನಾವಣೆ ಅನ್ನುವುದು ಯುದ್ಧ ಸೇನಾಧಿಪತಿ ಖಾದರ್ ಅವರನ್ನು ಉಳಿಸಲು ಕಾರ್ಯಕರ್ತರೆಲ್ಲರೂ ಸೈನಿಕರಾಗಿ ಕಾವಲು ಕಾಯಬೇಕಿದೆ. ಬೂತ್ ಅಧ್ಯಕ್ಷರು ,ಪಂ.ಸದಸ್ಯರು, ಸೋತವರಲ್ಲಿ ಮಾಹಿತಿ ಪಡೆದುಕೊಂಡು ಜೋಡಿಸುವ ಕೆಲಸಗಳಾಗಬೇಕು. ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದುಕೊಂಡು ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ನ.೨೨ ರಂದು ನಿಧನ ಹೊಂದಿದ ಜಿ.ಪಂ ಮಾಜಿ ಸದಸ್ಯೆ ಮಮತಾ ಡಿ.ಯಸ್ ಗಟ್ಟಿ ಇವರ ತಂದೆಯವರಾದ ಹಿರಿಯ ಕಾಂಗ್ರೆಸ್ ಮುಖಂಡ ಸಂಜೀವ ಗಟ್ಟಿ ಇವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಪದ್ಮನಾಭ ನರಿಂಗಾನ, ಸಂಜೀವ ಗಟ್ಟಿ ಧರ್ಮಕ್ಕಿ ಹಾಗೂ ತಾನು ಜತೆಗೆ ರಾಜಕೀಯ ಪ್ರವೇಶಿಸಿದವರು. ಕೈರಂಗಳ, ಬಾಳೆಪುಣಿ ಗ್ರಾ.ಪಂ.ನಲ್ಲಿ ಸೇವೆ ಸಲ್ಲಿಸಿದವರು. ಸಹಕಾರಿ ಸಂಘಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡವರು. ಪಕ್ಷಕ್ಕಾಗಿ ಅವರ ಕೊಡುಗೆ ಅಪಾರ. ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು ಎಲ್ಲರೂ ಮುನ್ನಡೆಯೋಣ ಎಂದರು.
ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಜಿ.ಪಂ ಮಾಜಿ ಸದಸ್ಯ ತುಂಬೆ ಪ್ರಕಾಶ್ ಶೆಟ್ಟಿ, ಕುರ್ನಾಡು ಗ್ರಾ.ಪಂ ಅಧ್ಯಕ್ಷ ಗಣೇಶ್ ನಾಯ್ಕ್, ಬಂಟ್ವಾಳ ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ , ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್ ಅಬ್ದುಲ್ಲಾ, ನಾಸಿರ್ ನಡುಪದವು, ಅರುಣ್ ಡಿಸೋಜ, ಸೇವಾದಳದ ಸಮೀರ್, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ದೇವದಾಸ್ ಭಂಡಾರಿ, ಎನ್.ಎಸ್ ಕರೀಂ, ರಹಿಮಾನ್ ಕೋಡಿಜಾಲ್, ಅಚ್ಚುತ್ತ ಗಟ್ಟಿ, ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಜಲೀಲ್ ಮೋಂಟುಗೋಳಿ, ಮಹಮ್ಮದ್ ಮುಸ್ತಾಫ ಹೈದರ್ ಕೈರಂಗಳ, ನಝರ್ ಷಾ ಪಟ್ಟೋರಿ ಉಪಸ್ಥಿತರಿದ್ದರು.
ನ.


