UN networks
ಉಳ್ಳಾಲ: ಅಕ್ರಮ ಚಟುವಟಿಕೆಗಳ ತಾಣ, ರಕ್ಷಣಾ ವ್ಯವಸ್ಥೆಯಿಲ್ಲದ ಪರವಾನಿಗೆ ರಹಿತ ಮಹಿಳಾ ವಸತಿಗೃಹವನ್ನು ತಕ್ಷಣವೇ ಮುಚ್ಚಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೋಟೆಕಾರು ಪಟ್ಟಣ ಪಂಚಾಯಿತಿನ 11 ನೇ ವಾರ್ಡಿನ ಸದಸ್ಯರು ಉಳ್ಳಾಲ ಪೊಲೀಸ್ ಠಾಣೆ ಹಾಗೂ ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮಡ್ಯಾರ್ ಪರಾಶಕ್ತಿ ದೇವಸ್ಥಾನದ ಎದುರುಗಡೆಯಿರುವ ಮಹಿಳಾ ವಸತಿಗೃಹ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದೆ. ಪಂ. ಅಧಿಕಾರಿಗಳಿಂದಲೇ ಮಾಹಿತಿ ತಿಳಿದುಬಂದಿದೆ.ಮಹಿಳಾ ವಸತಿ ಗೃಹಕ್ಕೆ ಬೇಕಾದ ರಕ್ಷಣಾ ವ್ಯವಸ್ಥೆಯೂ ಇಲ್ಲಿಲ್ಲ. ಸ್ಥಳೀಯರು ಇಲ್ಲಿ ರಾತ್ರಿ ಹೊತ್ತಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದನ್ನು ತಿಳಿಸಿದ್ದಾರೆ. ಹರ್ಷರಾಜ್ ಮುದ್ಯ ಎಂಬವರ ಮಾಲೀಕತ್ವದ ಮಹಿಳಾ ವಸತಿ ನಿಲಯವನ್ನು ತಕ್ಷಣವೇ ಮುಚ್ಚಿ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಲಬೇಕು ಎಂದು ವಾಡ್೯ ಸದಸ್ಯ ಹರೀಶ್ ಉಳ್ಳಾಲ ಪೊಲೀಸ್ ಠಾಣೆ ಹಾಗೂ ಕೋಟೆಕಾರು ಪ.ಪಂ.ಗೆ ದೂರು ನೀಡಿದ್ದಾರೆ.


