UN networks
ಮಂಗಳೂರು: ವ್ಯಕ್ತಿಯೋರ್ವ ತನ್ನ ಗುದದ್ವಾರದಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನವನ್ನಿಟ್ಟು ಸಾಗಾಟ ಮಾಡುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳೂರು ವಿಮಾನ ನಿಲ್ಡಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದೆ.
ಕಾಸರಗೋಡು ನಿವಾಸಿಯಾಗಿರುವ ಈತ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸುಮಾರು 38 ಲಕ್ಷ ಮೌಲ್ಯದ 741 ಗ್ರಾಂ ತೂಕದ ಚಿನ್ನದ ಪೌಡರ್ ಗಮ್ ನಲ್ಲಿ ಮಿಕ್ಸ್ ಮಾಡಿ ಉಂಡೆ ಮಾಡಿ ಗುದದ್ವಾರದಲ್ಲಿಟ್ಟು ಸಾಗಾಟ ಮಾಡುತ್ತಿದ್ದರು ಆದರೆ ತಪಾಸಣೆಯ ವೇಳೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಈತನನ್ನು ಬಂಧಿಸಲಾಗಿದೆ.


