UN NEWS NETWORKS
ಮಂಗಳೂರು: ಮಂಗಳೂರು ಕ್ಷೇತ್ರದ ಶಾಸಕ ಹಾಗೂ ವಿಪಕ್ಷ ಉಪನಾಯಕ ಯು.ಟಿ ಖಾದರ್ ಅವರು ತಮ್ಮ ಕಾರಿಗೆ ನಗರದ ರ‍್ಕ್ಯೂಟ್ ಹೌಸ್ ನಲ್ಲಿ ಸಿಬ್ಬಂದಿ ರ‍್ಗ ಹಾಗೂ ಪಕ್ಷದ ಮುಖಂಡರ ಜತೆಗೂಡಿ ಆಯುಧಪೂಜೆಯನ್ನು ಆಚರಿಸಿದರು. ಸಚಿವರಾಗಿದ್ದ ಸಂರ‍್ಭದಲ್ಲಿ ಬೆಂಗಳೂರಿನಲ್ಲಿ ಆಚರಿಸಿದ್ದ ಶಾಸಕರು ಈ ಬಾರಿ ಮಂಗಳೂರಿನಲ್ಲೇ ಆಚರಿಸುವ ಮೂಲಕ ಹಬ್ಬದ ಶುಭಾಷಯಗಳನ್ನು ಕೋರಿದರು.




ಜನರು ತಮ್ಮ ಜೀವನಕ್ಕೆ ಅರ್ಥವನ್ನು ನೀಡುವ ಅಥವಾ ಜೀವನೋಪಾಯಕ್ಕೆ ಅಗತ್ಯವಾದ ಸಾಧನಗಳೆಂದು ಪರಿಗಣಿಸುವ ಎಲ್ಲಾ ಉಪಕರಣಗಳು ಮತ್ತು ಸಲಕರಣೆಗಳಿಗೆ ಗೌರವವನ್ನು ಮತ್ತು ಕೃತಜ್ಞತೆಯನ್ನು ಸಲ್ಲಿಸಲು ಆಯುಧ ಪೂಜೆಯನ್ನು ಮಾಡುತ್ತಾರೆ. ಇದಕ್ಕೆ ಪೂರಕವಾಗಿ ಯು.ಟಿ ಖಾದರ್ ಅವರು ತಾವು ನಿತ್ಯ ಸಂಚರಿಸುವ ಇನೋವಾ ಕಾರಿಗೆ ಪೂಜೆ ನೆರವೇರಿಸಿದರು. ಹೂವುಗಳಿಂದ ಕಾರನ್ನು ಅಲಂಕೃತಗೊಳಿಸಿ ಬಳಿಕ ಪೂಜೆಯನ್ನು ಸಿಬ್ಬಂದಿ ಭವಿತ್ ಬಂಗೇರ ನೆರವೇರಿಸಿದರು.
ಈ ಸಂರ‍್ಭ ಮಂಗಳೂರು ಕ್ಷೇತ್ರ ಕಾಂಗ್ರೆಸ್ ಮುಖಂಡರುಗಳಾದ ಸುರೇಶ್ ಭಟ್ನಗರ, ಸದಾಶಿವ ಉಳ್ಳಾಲ್, ದೀಪಕ್ ಪಿಲಾರ್, ಖಾದರ್ ಮುಕ್ಕಚ್ಚೇರಿ, ರಫೀಕ್ ಉಳ್ಳಾಲ, ಜಬ್ಬಾರ್ ಬೋಳಿಯಾರ್, ಲಿಬ್ಝತ್, ಭವಿತ್ ಬಂಗೇರ ಉಪಸ್ಥಿತರಿದ್ದರು.


