ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು : ಬಂಟ ಸಮಾಜದವರು ಯಾವುದೇ ಕೆಲಸವನ್ನು ಕೊಟ್ಟರೆ ಆ ಕೆಲಸವನ್ನು ನಿಯತ್ತಿನಿಂದ ನಿಸ್ವಾರ್ಥದಿಂದ ಹಾಗೂ ಬದ್ಧತೆಯಿಂದ ಮಾಡುವುದರಿಂದಾಗಿ ಬಂಟರು ಪ್ರತಿ ಕ್ಷೇತ್ರದಲ್ಲಿ ಗುರುತಿಸಿಕೊಂಡು ಛಾಪು ಮೂಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಬಂಟರ ಮಾತೃಸಂಘದ ಮಾಜಿ ಉಪಾಧ್ಯಕ್ಷ ಕೆ. ಬಲರಾಜ್ ರೈ ಅಭಿಪ್ರಾಯಪಟ್ಟರು.
ಅವರು ಬಂಟರ ಸಂಘ ಉಳ್ಳಾಲ ವಲಯ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸಿರಿ ಸ್ವ ಸಹಾಯ ಗುಂಪುಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತೊಕ್ಕೊಟ್ಟು ಅಂಬಿಕಾರೋಡು ಗಟ್ಟಿ ಸಮಾಜ ಭವನದಲ್ಲಿ ಭಾನುವಾರ ನಡೆದ ವಲಯ ಸಂಘದ ಮಹಾಸಭೆಯ ಬಹಿರಂಗ ಅಧಿವೇಶನ, ಆಟಿದ ಪೆÇರ್ಲು-2015 ಹಾಗೂ ಪಂಚಾಯತ್ ಚುನಾವಣೆಯಲ್ಲಿ ವಿಜಯಿಗಳಾದ ಸಮಾಜ ಬಾಂಧವರಿಗೆ ಅಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.









ಬಂಟರು ದೈವ ದೇವರ ನಡೆ ನುಡಿಗಳಿಗೆ ಅಪಾರ ಗೌರವ ಕೊಡುತ್ತಾ ಪಾಲಿಸಿಕೊಂಡು ಬಂದವರು. ಕೆಲವೊಂದು ಕಟ್ಟು ಸಂಪ್ರದಾಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ. ಬಂಟರು ವಿನಯ ಹಾಗೂ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದ್ದಾರೆ. ಹಾಗೂ ಬಂಟ ಸಮಾಜವನ್ನು ಇತರ ಸಮಾಜ ಬಾಂಧವರು ದ್ವೇಷಿಸುತ್ತಿಲ್ಲ, ಮಾದರಿಯಾಗಿ ಸ್ವೀಕರಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಳ್ಳಾಲ ವಲಯದ ವಿವಿಧ ಗ್ರಾಮ ಪಂಚಾಯತ್‍ಗಳಲ್ಲಿ ಚುನಾಯಿತ ಸದಸ್ಯರಿಗೆ ಹಾಗೂ ಸಹಕಾರ ಸಂಘಗಳಿಗೆ ಆಯ್ಕೆಯಾದ ಸಮಾಜ ಬಾಂಧವರನ್ನು ಗೌರವಿಸಲಾಯಿತು. ಪ್ರತಿ ಗ್ರಾಮದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಉದ್ಯಮಿ ಗೋಪಾಲಕೃಷ್ಣ ಮೇಲಂಟ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಮಹಾನಗರಪಾಲಿಕೆಯ ಕಾಪೆರ್Çರೇಟರ್ ಪ್ರೇಮಾನಂದ ಶೆಟ್ಟಿ ಸಾಹಿತಿ ಅತ್ರಾಡಿ ಆಮೃತಾ ಶೆಟ್ಟಿ , ಬಂಟರ ಮಾತೃ ಸಂಘದ ಪದಾಧಿಕಾರಿ ರವೀಂದ್ರನಾಥ ಪೂಂಜ ಉಪಸ್ಥಿತರಿದ್ದರು.
ಇದೇ ಸಂದರ್ಭ ವಲಯ ಸಂಘದ ಮಹಾಸಭೆಯ ಅಧಿವೇಶನ ನಡೆಯಿತು.
ಆರ್.ಕೆ.ಶೆಟ್ಟಿ ಸ್ವಾಗತಿಸಿದರು. ಮೋಹನ್‍ದಾಸ್ ಶೆಟ್ಟಿ ನೆತ್ತಿಲಬಾಳಿಕೆ ಸನ್ಮಾನಿತರ ಕುರಿತು ಪರಿಚಯಿಸಿದರು. ತಲಪಾಡಿ ಗೋಪಾಲಕೃಷ್ಣ ಮೇಲಂಟ ಹಾಗೂ ಆನಂದ ಶೆಟ್ಟಿ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಸುಜಾತ ಶೆಟ್ಟಿ ವಂದಿಸಿದರು.




