UN networks
ಉಳ್ಳಾಲ: ಗುರುತಿನ ಚೀಟಿಗೆ ಆಧಾರ್ ಜೋಡಣೆ ಕಾರ್ಯದಲ್ಲಿ ಶೇ.96.05% ದಾಖಲಿಸಿದ ತುಂಬೆ ಗ್ರಾಮದ ಭಾಗ ಸಂಖ್ಯೆ 86 ಬೂತ್ ಮಟ್ಟದ ಅಧಿಕಾರಿ ಸಂಧ್ಯಾರಾಣಿ ಕೆ. ಇವರನ್ನು ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು ಇಂದು ಪುದು ಗ್ರಾಮ ಪಂಚಾಯಿತಿನಲ್ಲಿ ಸನ್ಮಾನಿಸಿದರು.

ಪುದು ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಬೂತ್ ಮಟ್ಟದ ಸಭೆಯಲ್ಲಿ ಸನ್ಮಾನ ನಡೆಯಿತು.
ಈ ಸಂದರ್ಭ ಮಂಗಳೂರು ಬಿ ಹೋಬಳಿಯ ಕಂದಾಯ ನಿರೀಕ್ಷಕ ಮಂಜುನಾಥ್ ಕೆ .ಹೆಚ್, ಪುದು ಗ್ರಾಮಕರಣಿಕೆ ಕುಮಾರಿ ವಿಜೇತಾ ಉಪಸ್ಥಿತರಿದ್ದರು.


