ಮಂಗಳೂರು: ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದ ಆರೋಪಿ ಮಾಝ್ ತಂದೆ ಶುಕ್ರವಾರದಂದು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ.
ಶಂಕಿತ ಉಗ್ರ ಮಾಝ್ ತಂದೆ ಮುನೀರ್ ಸಾಬ್ ಜಾನ್(55) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮುನೀರ್ ಸಾಬ್ ಕಳೆದ ಐದು ವರ್ಷಗಳಿಂದ ಮಗ ಮಾಝ್ ಮತ್ತು ಪತ್ನಿ ಜೊತೆಮಂಗಳೂರಿನ ಬಲ್ಮಠ ಬಳಿಯ ಪ್ರೆಸಿಡೆನ್ಸಿ ಅವೆನ್ಯೂನಲ್ಲಿ ಪ್ಲಾಟಿನಲ್ಲಿ ವಾಸವಾಗಿದ್ದರು.ಮಗ ಉಗ್ರ ಚಟುವಟಿಕೆಯಲ್ಲಿ ಬಂಧಿತನಾದ ಬಳಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.


