UN NEWS NETWORKS
ಉಳ್ಳಾಲ: ಉಳ್ಳಾಲ ನಗರಸಭೆಯ ಆಡಳಿತ ವ್ಯವಸ್ಥೆಯಲ್ಲಿ ಹಗರಣಗಳು ನಡೆದಿದೆ ಎಂದು ಪ್ರತಿಪಕ್ಷಗಳ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆರೋಪ ಮಾಡಿದ್ದು, ಈ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲು ನಗರಸಭಾ ಆಡಳಿತ ಸಂಪೂರ್ಣ ಬದ್ಧವಾಗಿದೆ. ಆದಾಯ ಸೋರಿಕೆಯ ವಿಚಾರದಲ್ಲಿ ಅಽಕಾರಿಗಳು ಹಗರಣ ನಡೆಸಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ತನಿಖೆಗೆ ಆದೇಶ ನೀಡಿದ್ದು, ಆಡಳಿತದಲ್ಲಿ ಲೋಪ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಳ್ಳಾಲ ನಗರಸಭಾ ಅಧ್ಯಕ್ಷ ಚಿತ್ರಕಲಾ ಚಂದ್ರಕಾಂತ್ ತಿಳಿಸಿದ್ದಾರೆ.

ತೊಕ್ಕೊಟ್ಟಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾನ್ಯ ಸಭೆಯಲ್ಲಿ ಆರೋಪಗಳು ಪ್ರತ್ಯಾರೋಪಗಳು ಸಾಮಾನ್ಯ ಆದರೆ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಂದಿಸುವುದು ಆಡಳಿತ ನಡೆಸುವವರ ಕರ್ತವ್ಯ ಈ ನಿಟ್ಟಿನಲ್ಲಿ ಉಳ್ಳಾಲ ನಗರಸಭಾ ಕಮಿಷನರ್ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಿ ಭ್ರಷ್ಟಾಚಾರ ನಡೆಸಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭಾ ಉಪಾಧ್ಯಕ್ಷ ಆಯೂಬ್ ಮಂಚಿಲ ಮಾತನಾಡಿ ಕಳೆದ ೧೮ ತಿಂಗಳ ಅಽಕಾರದಲ್ಲಿ ಪೊಕ್ಷ ಬೇಧವಿಲ್ಲದೆ ಪ್ರತೀ ವಾರ್ಡ್ನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಗರಸಭೆಯ ಮೇಲೆ ಬಂದಿರುವ ಆರೋಪಗಳನ್ನು ನಾವು ನಿರ್ಲಕ್ಷ್ಯ ಮಾಡಿಲ್ಲ. ಅಧಿಕಾರಿಗಳ ಸಭೆ ನಡೆಸಿ ಇದರ ಸತ್ಯಾಸತ್ಯತೆಯನ್ನು ಕಂಡು ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ, ಆರೋಪ ಸಾಬಿತಾದಲ್ಲಿ ಪಕ್ಷ ಬೇದವಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಕಮಿಷನರ್‌ಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಗಿದೆ ಎಂದರು.
ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಮಾತನಾಡಿ ಶಾಸಕ ಯು.ಟಿ.ಖಾದರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಜನಪ್ರತಿನಿಽಗಳು ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿಲ್ಲ. ಕಳೆದ ಹಲವು ವರುಷಗಳ ನಗರಸಭೆಯ ಆಡಳಿತದಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿಯನ್ನು ಮಾಡಿದೆ. ಸ್ವಪಕ್ಷದ ಕೌನ್ಸಿಲರ್ ರವಿಚಂದ್ರ ಗಟ್ಟಿ ಕಚೇರಿಯಲ್ಲಿ ನಡೆಸಿದ ಪ್ರತಿಭಟನೆಯ ರೀತಿ ಶೋಭೆ ತರುವಂತದಲ್ಲ ಪಕ್ಷ ವಿರೋದಿ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ವರಿಷ್ಟರು ತೀರ್ಮಾನ ಕೈಗೊಳ್ಳುತ್ತಾರೆ. ಓರ್ವ ಸದಸ್ಯನಿಗೆ ಆತನದೇ ಆದ ಗೌರವ ಇದೆ. ಆದರೆ ಕುಡಿದು ಬಂದು ಅರೆ ಬೆತ್ತಲೆ ಪ್ರತಿಭಟನೆ ಮಾಡುವುದು ಸರಿಯಲ್ಲ. ಅವರ ಆರೋಪಗಳ ವಿಚಾರದಲ್ಲಿ ತನಿಖೆ ನಡೆಸಿ ವರದಿಯಂತೆ ಕ್ರಮಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಾಫ ಅಬ್ದುಲ್ಲ, ನಗರಸಭಾ ಸದಸ್ಯರಾದ ಮಹಮ್ಮದ್ ಮುಕ್ಕಚ್ಚೇರಿ, ವೀಣಾ ಡಿ.ಸೋಜಾ, ಶಶಿಕಲಾ, ಸಪ್ನಾ ಹರೀಶ್, ಬಾಝಿಲ್ ಡಿ.ಸೋಜಾ, ಯು.ಎ. ಇಸ್ಮಾಯಿಲ್, ಭಾರತಿ, ಇಬ್ರಾಹಿಂ ಅಶ್ರಫ್, ದೀಕ್ಷಿತಾ, ಮುಖಂಡರಾದ ಸುರೇಶ್ ಭಟ್ನಗರ ಮತ್ತು ಆಸಿಪ್ ಅಂಬಟಡಿ ಉಪಸ್ಥಿತರಿದ್ದರು.


