UN networks
ಬೆಳ್ಳಾರೆ: ಪ್ರವೀಣ್ ಹತ್ಯೆ ಆರೋಪಿಗಳಿಗೆ ಬೇಲ್ ಕೊಟ್ಟರೆ ಹಿಂದೂ ಸಮಾಜ ಬಿಡಲ್ಲ. ಅವರ ಮೇಲೆ ಕೋಕಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸುವ ಕೆಲಸ ಸರ್ಕಾರ ಮಾಡಲಿ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ದ.ಕ ಜಿಲ್ಲಾ ಪ್ರವೇಶ ನಿರ್ಬಂಧ ತೆರವಾದ ಹಿನ್ನೆಲೆಯಲ್ಲಿ
ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಹಾಗೂ ಪ್ರವೀಣ್ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ನೀಡಿ ಬಳಿಕ ಮಾತನಾಡಿದ್ದಾರೆ.

ಪ್ರವೀಣ್ ಸಾವನ್ನು ಕಾರ್ಯಕರ್ತರಾದ ನಾವು ವ್ಯರ್ಥವಾಗಲು ಬಿಡಲ್ಲ. ಸರ್ಕಾರ ಏನು ಮಾಡುತ್ತೋ ಬಿಡುತ್ತೋ ನಮಗೆ ಗೊತ್ತಿಲ್ಲ ಆದರೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗೋವರೆಗೆ ನಾವು ವಿರಮಿಸಲ್ಲ. ಇಂಥ ಇಸ್ಲಾಮಿಕ್ ಗೂಂಡಾಗಳಿಗೆ ಭಾರತದ ನೆಲದಲ್ಲಿ ಅವಕಾಶ ಮಾಡಿ ಕೊಡಲ್ಲ. ಆರೋಪಿಗಳಿಗೆ ಬೇಲ್ ಕೊಟ್ಟರೆ ಹಿಂದೂ ಸಮಾಜ ಬಿಡಲ್ಲ. ಅವರ ಮೇಲೆ ಕೋಕಾ ಕಾಯಿದೆ ಹೇರುವ ಕೆಲಸ ಸರ್ಕಾರ ಮಾಡಲಿ. ಪ್ರವೀಣ್ ಕುಟುಂಬಕ್ಕೆ ಸಿಎಂ ಕೆಲಸ ಕೊಡುವ ಭರವಸೆ ಕೊಟ್ಟಿದ್ದಾರೆ. ಆದರೆ ಇದು ಭರವಸೆ ಆಗಬಾರದು. ಹಿಂದೆಯೂ ಭರವಸೆ ಕೊಟ್ಟು ಈಡೇರಿಸಿಲ್ಲ. ಶರತ್ ಮಡಿವಾಳ, ಪರೇಶ್ ಮೇಸ್ತಾ ವಿಚಾರದಲ್ಲಿ ಹೀಗೇ ಆಗಿದೆ. ಭರವಸೆ ಈಡೇರಿಸದೇ ಇದ್ದರೆ ನಿಮ್ಮ ಮನೆಯ ಎದುರು ಧರಣಿ ಮಾಡ್ತೇವೆ. ಧರಣಿ ಜೊತೆಗೆ ನಿಮ್ಮ ಮುಖಕ್ಕೆ ಮಸಿ ಬಳೀತಿವಿ ಎಂದಿದ್ದಾರೆ.


