UN NEWS NETWORKS
ಮುಡಿಪು : ಮೊಂಟೆಪದವು ಮರಿಕ್ಕಳ ಜುಮಾ ಮಸೀದಿ ಇಲ್ಲಿ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಎರಡನೇ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಸೆ.21 ರಿಂದ 25 ರ ವರೆಗೆ ಮರಿಕ್ಕಳ ಜುಮಾ ಮಸೀದಿಯಲ್ಲಿ ಜರಗಲಿದೆ ಎಂದು ಜುಮಾ ಮಾ್ಜಿದ್ ಮರಿಕ್ಕಳ ದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಹೇಳಿದರು.
ಅವರು ಮರಿಕ್ಕಳ ಜುಮಾ ಮಸೀದಿ ವಠಾರದಲ್ಲಿ ಇಂದು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.


ಸೆ. 21 ರಂದು ಮರಿಕ್ಕಳ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ಬಾಸ್ ಕೊಡಂಚಿಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 7 ಕ್ಕೆ ಉದ್ಘಾಟನಾ ಸಮಾರಂಭ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿದೆ.8 ಕ್ಕೆ ಸಯ್ಯದ್ ತ್ವಾಹಾ ತಂಞಳ್ ಪೂಕೋಟೂರು ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ.
ಸೆ. 22 ರಂದು ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಕಾಸರಗೋಡು ಸಅದಿಯ್ಯ ಜಾಮಿಅ: ಪ್ರೊಫೆಸರ್ ಹುಸೈನ್ ಸ ಅದಿ ಕೆ.ಸಿ ರೋಡ್ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಪ್ರಭಾಷಣಗೈಯ್ಯಲಿದ್ದಾರೆ.
ಸೆ. 23 ರಂದು ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಮುಖ್ಯಪ್ರಭಾಷಣ ಹಾಗೂ ರಫೀಕ್ ಸ ಅದಿ ದೇಲಂಪಾಡಿ ಪ್ರಭಾಷಣಗೈಯ್ಯಲಿದ್ದಾರೆ. ಶಾಸಕರುಗಳಾದ ಯು.ಟಿ ಖಾದರ್, ಎಕೆಎಂ ಅಶ್ರಫ್ , ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ , ಯೆನೆಪೋಯ ವಿ.ವಿ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ, ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂಕ್, ರಾಜೀವ್ ಗಾಂಧಿ ವಿ.ವಿಯ ಸಿಂಡಿಕೇಟ್ ಸದಸ್ಯ ಡಾ. ಇಫ್ತಿಕಾರ್ ಆಲಿ, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಆಲಿ ಮುಂತಾದವರು ಭಾಗವಹಿಸಲಿದ್ದಾರೆ.
ಸೆ.24 ರಂದು ಸ್ವಲಾತ್ ವಾರ್ಷಿಕ ನಡೆಯಲಿದ್ದು, ಸೈಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲ್ ತಂಞಳ್ ಕಾಜೂರು ನೆರವೇರಿಸಲಿದ್ದಾರೆ.
ಸೆ. 25 ರಂದು ದ್ಸಿಕ್ರ್ ಮಜ್ಸಿಸ್ ಮೌಲಿದ್ ಪಾರಾಯಣ, ಅನುಸ್ಮರಣೆ ಹಾಗೂ ಅನ್ನದಾನ ನಡೆಯಲಿದೆ. ಸೈಯ್ಯದ್ ಖರ್ರತುಸ್ಸಾದಾತ್ ಕೂರತ್ ತಂಞಳ್, ಸೈಯ್ಯಿದ್ ಆಟಕೋಯ ತಂಞಳ್ ಕುಂಬೋಳ್, ಡಾ. ಮುಹಮ್ಮದ್ ಪಾಝಿಲ್ ರಝ್ವಿ ಹಝ್ರತ್ ಕಾವಲ್ಕಟ್ಟೆ, ಸೈಯದ್ ಸಾದಾತ್ ತಂಞಳ್ ಪಡ್ಡಂತಡ್ಕ ಭಾಗವಹಿಸಲಿದ್ದು, ಬಹು! ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಪ್ರಭಾಷಣಗೈಯ್ಯಲಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷ ಅಬ್ಬಾಸ್ ಕೆ ,ಉಪಾಧ್ಯಕ್ಷ ಅಬ್ಬಾಸ್ ಜಲೀಲ್ , ಹನೀಫ್ ಚಂದಹಿತ್ಲು,ಪ್ರಚಾರ ಸಮಿತಿ ಅಧ್ಯಕ್ಷ ರಹಿಮಾನ್ ಚಂದಹಿತ್ಲು , ಅಬ್ಬಾಸ್ ಖಾದರ್ ಕಟ್ಟೆಪುಣಿ ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ಹಮೀದ್ ಎಂ.ಎಚ್ , ಅಝರ್ , ಆಲಿಕುಂಞಿ ,ಮರಿಕ್ಕಳ ಮಸೀದಿ ಮುದರ್ರಿಸ್ ಅಬ್ಬಾಸ್ ಸಖಾಫಿ ಮಡಿಕೇರಿ ,
ಮುಹಮ್ಮದ್ ಸಖಾಫಿ ಪೂಡಲ್ ಬಶೀರ್ ಮಜಲ್ ಮೊಹಮ್ಮದ್ ಬೆರೆ , ಅಬ್ಬಾಸ್ ನಿಡ್ಮಾಡ್, ಶೇಖಬ್ಬ ಬರೆಬಾಯಿ ಮತ್ತಿತರರು ಉಪಸ್ಥಿತರಿದ್ದರು.


