UN netowrks
ಕಡಬ: ಹಳೇ ವೈಷಮ್ಯದ ಹಿನ್ನಲೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಕಡಬ ತಾಲೂಕಿನ ಕೊಯಿಲಾ ಎಂಬಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ನೌಫಲ್(29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಯಿಲಾ ಗ್ರಾಮದ ಮಹಮ್ಮದ್ ನವಾಜ್ (29) ಎಂಬವರು ಇರಿತಕ್ಕೊಳಗಾದವರು
ಆರೋಪಿ ಕೊಯಿಲಾ ಬಳಿಯ ಮೊಬೈಲ್ ಅಂಗಡಿ ಮಾಲೀಕನಾಗಿದ್ದು ಹಳೆಯ ದ್ವೇಷವೇ ಕೊಲೆಗೆ ಮೂಲಕ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
2011ರಲ್ಲಿ ಉಪ್ಪಿನಂಗಡಿಯಲ್ಲಿ ಅಶೋಕ್ ಶೆಟ್ಟಿ ಎಂಬ ಮೀನಿನ ವ್ಯಾಪಾರಿ ಮೇಲೆ ಇರಿತಕ್ಕೊಳಗಾದ ನವಾಜ್ ದಾಳಿ ನಡೆಸಿದ್ದನು. ಈ ಸಂಬಂಧ ಆತನನ್ನು 2011 ರಂದು ಪೊಲೀಸರು ನವಾಜ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ವೇಳೆ ನೌಫಲ್ ಸಹೋದರ ಸಿನಾನ್ ಹೆಸರನ್ನು ನವಾಝ್ ಹೇಳಿದ್ದು ಹೀಗಾಗಿ ಅಂದು ಸಿನಾನ್ ವಿಚಾರಣೆಯನ್ನು ಪೊಲೀಸರು ನಡೆಸಿದ್ದರು. ಇದೇ ಕಾರಣಕ್ಕೆ ನವಾಜ್ ಮೇಲೆ ದ್ವೇಷ ಹೊಂದಿದ್ದ ನೌಫಲ್ ತನ್ನ ಮಾಲೀಕತ್ವದ. ಅಂಗಡಿ ಬಳಿ ನವಾಜ್ ನನ್ನು ಕರೆದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


