UN networks
ಮುನ್ನೂರು: ಸರಕಾರದ ಆದೇಶದಂತೆ ಗ್ರಾಮದ ಆಡಳಿತ ಸೇರಿದಂತೆ ಗ್ರಾಮಮಟ್ಟದಲ್ಲಿ ಮನೆಯನ್ನು ಭೇಟಿ ನೀಡುವ ಕಾರ್ಯಕರ್ತರಿಗೆ ಕಾರ್ಯಗಾರಗಳ ಮೂಲಕ ಸರಕಾರಿ ವ್ಯವಸ್ಥೆಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಇದನ್ನು ತಮ್ಮ ಸೇವಾ ಕಾರ್ಯದಲ್ಲಿ ವಿನಿಯೋಗಿಸಿಕೊಂಡು ಗ್ರಾಮಸ್ಥರಿಗೆ ಸಹಕಾರಿಯಾಗಬೇಕು ಎಂದು ಮುನ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ್ ನಾಯಕ್ ಅಭಿಪ್ರಾಯಪಟ್ಟರು.
ಅವರು ಮುನ್ನೂರು ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಮುನ್ನೂರು ಸಹಭಾಗಿತ್ವದಲ್ಲಿ ಇತ್ತೀಚೆಗೆ ಆಯೋಜಿಸಲಾದ ಸ್ವಚ್ಛತಾ ಮಿಷನ್ ಇದರ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನ್ನೂರು ಗ್ರಾ. ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಉಪಾಧ್ಯಕ್ಷೆ ರಾಜೇಶ್ವರಿ, ವಲಯ ಮೇಲ್ವಿಚಾರಕಿ ಸೀತಾ .ಕೆ , ಪ್ರಾಥಮಿಕ ಆರೋಗ್ಯ ಇಲಾಖೆಯ ಜಯಂತಿ, ಪಂಚಾಯತ್ ಲೆಕ್ಕ ಪರಿಶೋದಕಿ ರಾಧ ಉಪಸ್ಥಿತರಿದ್ದರು. ಸ್ವಚ್ಛತ ಮಿಷನ್ ಜಿಲ್ಲಾ ಸಂಯೋಜಕ ದೊಂಬಯ್ಯ , ಮಕ್ಕಳ ರಕ್ಷಣಾ ಘಟಕದ ವಲಯ ಸಂಯೋಜಕ ಕುಮಾರ್ ಶೆಟ್ಟಿಗಾರ್,ಉಮೇಶ್ ನಿರ್ಮಾನ್, ಸಖಿ ಸಂಸ್ಥೆಯ ಪ್ರಿಯಾ, ಫಸ್ಟ್ ನ್ಯುರೋ ಆಸ್ಪತ್ರೆಯ ಸತ್ಯರಾಜ್, ಜೋಬಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಕಾರ್ಯಗಾರದಲ್ಲಿ ಘಟಕದ ಯೋಜನೆ , ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಹಾಗೂ ಆನ್ ಲೈನ್ ಸುರಕ್ಷತೆ , ಮಹಿಳಾ ದೌರ್ಜನ್ಯ , ಹೃದಯಾಘಾತ ತಡೆ, ಬೆಂಕಿ ಅವಘಢದ ವೇಳೆ ರಕ್ಷಣೆ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು.
ಪೆರ್ಮನ್ನೂರು ವಲಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಸದಸ್ಯರು, ಗ್ರಾ.ಪಂ ಆಡಳಿತ ಭಾಗವಹಿಸಿದ್ದರು. ಇದೇ ಸಂದರ್ಭ ಪೆÇೀಷಣ್ ಆಭಿಯಾನ್ ಕಾರ್ಯಕ್ರಮದಡಿಯಲ್ಲಿ ಗ್ರಾಮಮಟ್ಟದ ಪೌಷ್ಠಿಕ ಸಪ್ತಾಹ ನಡೆಯಿತು.
ಪಂಚಾಯತ್ ಕಾರ್ಯದರ್ಶಿ ಶಾಂತಿ ಸ್ವಾಗತಿಸಿದರು. ಸುನಿತಾ ಗಟ್ಟಿ ನಿರೂಪಿಸಿದರು. ಪ್ರೇಮ ವಂದಿಸಿದರು.




