UN networks
ಉಳ್ಳಾಲ: ಹೆತ್ತವರು ಮಕ್ಕಳಿಗೆ ನೀಡುವ ಶಿಕ್ಷಣದಿಂದ ಮಕ್ಕಳ ಭವಿಷ್ಯ ನೆಲೆಯೂರುವುದು. ಹಾಡಲು ಗುಣಮಟ್ಟದ ಸ್ವರ ಇರುವಂತಹ ಪ್ರತಿಭೆ ಶ್ರೀ ರಕ್ಷಾ, ಸಂಗೀತ ಕ್ಷೇತ್ರದಲ್ಲಿ ಇರುವಂತಹ ಆಕೆಯ ಪ್ರತಿಭೆಗೆ ಹೆತ್ತವರು ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ಆಕೆ ಬೆಳೆಯಲು ಸಾಧ್ಯವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗದ ಆಯೋಗದ ನಿರ್ದೇಶಕ ಕೆ.ಟಿ ಸುವರ್ಣ ಅಭಿಪ್ರಾಯಪಟ್ಟರು.

ಅವರು ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀರಕ್ಷಾ ಹೆಚ್.ಎಸ್ ಪೂಜಾರಿ ಕೊಣಾಜೆ ಇವರು ಹಾಡಿರುವ ‘ರಘುವೀರ ಗದ್ಯಂ ವೀಡಿಯೋ ಆಲ್ಬಂ ಬಿಡುಗಡೆ ಸಮಾರಂಭ ಹಾಗೂ ಶಿಕ್ಷಕರ ದಿನಾಚರಣೆ ಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಗಂಗಾಧರ್ ಪೂಜಾರಿ ಮಾತನಾಡಿ
ಬಾಲಕಿ ರಕ್ಷಾ ರಾಗದ ಮೂಲಕ ವಿಶ್ವಮನ್ನಣೆಯನ್ನು ಪಡೆಯಬೇಕಿದೆ. ಎಲ್ಲರ ಹಾರೈಕೆ ಆಕೆಗೆ ಶ್ರೀರಕ್ಷೆಯಾಗಲಿ, ಹಲವಾರು ಧ್ವನಿಸುರುಳಿ ಬಿಡುಗಡೆಯಾಗುವ ಮೂಲಕ ಖ್ಯಾತಿಯನ್ನು ಪಡೆಯಬೇಕು ಎಂದರು
ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಕೊಣಾಜೆ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಚಂದ್ರಹಾಸ್ ಅಮೀನ್ , ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ, ಕೊಣಾಜೆ ವಿಶ್ವಮಂಗಳ ಶಾಲೆ ಶಿಕ್ಷಕಿ ಮರಿಯಾ ಡಿಸೋಜ, ತುಳುನಾಡು ಫೌಂಡೇಶನ್ ಸಂಸ್ಥಾಪಕ , ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಸ್ಥಾಪಕ ಚಂದ್ರಹಾಸ್ , ರಾಜೇಶ್ ಬಿ.ಸಿ ರೋಡ್ , ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತ ತಾರನಾಥ ಕೈರಂಗಳ, ಹಿರಿಯ ಜಿನ್ನಪ್ಪ ಪೂಜಾರಿ , ದೇವಪ್ಪ ಶಾಂತಿ, ಸುಧಾಕರ ಪೂಜಾರಿ ಪಾಲಡ್ಕ, ಹರೀಶ್ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭ ಬ್ರಹ್ಮಶ್ರೀ ನಾರಾಯಣ ಗುರು ಸಂಘದ ವತಿಯಿಂದ ಶ್ರೀ ರಕ್ಷಾ ಹೆಚ್.ಎಸ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಹಾಡಿನ ನಿರ್ದೇಶನವನ್ನು ಸಂಜಿತ್ ಎಸ್.ಹೆಚ್.ಎನ್ ಹಾಗೂ ವೀಡಿಯೋ ಚಿತ್ರೀಕರಣವನ್ನು ತೇಜೇಶ್ ಗಟ್ಟಿ ಮಾಡಿದ್ದಾರೆ.
ಸುರೇಖಾ ಹರೀಶ್ ಪೂಜಾರಿ ಸ್ವಾಗತಿಸಿದರು.
ರೇಣುಕಾ ಕಾಣಿಯೂರು ನಿರೂಪಿಸಿದರು.
ರವೀಂದ್ರ ಬಂಗೇರ ವಂದಿಸಿದರು.


