
ಉಳ್ಳಾಲ: ಯೆನೆಪೋಯ ವೈದ್ಯಕೀಯ ವಿಶ್ವವಿದ್ಯಾಲಯದ ಶರೀರ ಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚಿನ ವೈದ್ಯಕೀಯ ವಿಜ್ಞಾನಗಳ ಪ್ರಗತಿಯ ಬಗ್ಗೆ ಅಂತಾರಾಷ್ಟ್ರೀಯ ಇ-ಕಾನ್ಫರೆನ್ಸ್ RAMSIECON 2021 ದೇರಳಕಟ್ಟೆಯ ಯೆನೆಪೋಯ ಸಂಸ್ಥೆಯಲ್ಲಿ ನಡೆಯಿತು.
ಗೂಗಲ್ ಮೀಟ್ ಮತ್ತು ಯೂಟ್ಯೂಬ್ ಪ್ಲಾಟ್‍ಫಾರ್ಮ್‍ನ ಮುಖಾಂತರ ಉದ್ಘಾಟನೆ ನಡೆಯಿತು. ಈ ಸಮ್ಮೇಳನವು ಯುವ ಸಂಶೋಧಕರಿಗೆ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ನೂತನ ಆವಿಷ್ಕಾರಗಳ ಬಗ್ಗೆ ತಿಳಿಯಲು ಒಂದು ವೇದಿಕೆಯನ್ನು ಒದಗಿಸಿದೆ. ಭಾರತ ಮತ್ತು ವಿದೇಶಗಳಿಂದ ಸುಮಾರು 238 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದರು.
ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಸಿ.ಎನ್. ಮಾತನಾಡಿ ವೈದ್ಯಕೀಯ ಪ್ರಗತಿಯ ಮಾಹಿತಿ ಮತ್ತು ಬೆಳವಣಿಗೆಗಳನ್ನು ಪ್ರಚುರ ಪಡಿಸುವಲ್ಲಿ ಯೆನೆಪೋಯ ವಿಶ್ವವಿದ್ಯಾಲಯವು ಮುಂಚೂಣಿಯಲ್ಲಿದ್ದು ಅದು ಸಮಯೋಚಿತವಾದದ್ದು ಎಂದು ಶ್ಲಾಘಿಸಿದರು.
ಈ ವೇಳೆ ಯೆನೆಪೋಯ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಬಿ. ಎಚ್. ಶ್ರೀಪತಿ ರಾವ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಯೆನೆಪೆÇೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಡಾ.ಎಂ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಯೆನೆಪೋಯದ ವಿಶ್ವಯವಿದ್ಯಾಲಯದ ಕುಲಸಚಿವ ಡಾ.ಕೆ.ಎಸ್ ಗಂಗಾಧರ ಸೋಮಯಾಜಿ ಮತ್ತು ಪರೀಕ್ಷೆಗಳ ನಿಯಂತ್ರಕ ಡಾ. ನಂದೀಶ್ ಬಿ.ಟಿ. ಉಪಸ್ಥಿತರಿದ್ದರು.
ಸಮ್ಮೇಳನದ ಸಂಘಟನಾ ಅಧ್ಯಕ್ಷರಾದ ಡಾ. ಪದ್ಮಿನಿ ಟಿ ಸ್ವಾಗತಿಸಿದರು.
ಸಂಘಟನಾ ಕಾರ್ಯದರ್ಶಿ ಡಾ.ಶೋಬಿತ್ ಬಿ ಅವರು ಯೆನೆಪೆÇೀಯದ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುನ್ಹಿ ಅವರ ಸಂದೇಶವನ್ನು ಓದಿದರು.
ಸಂಘಟನಾ ಕಾರ್ಯದರ್ಶಿ ಡಾ.ಗ್ರೀಷ್ಮ ಬಿ. ವಂದಿಸಿದರು.

