
ಉಳ್ಳಾಲ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಲವ್ ಜಿಹಾದ್ ಗೆ ಕಾನೂನು ತರುತ್ತೇವೆ ಅಂತಾ ಹೇಳಿದವರು ಗ್ರಾಮ ಪಂಚಾಯತ್ ಚುನಾವಣೆ ಮುಗಿದ ತಕ್ಷಣ ಸುಮ್ಮನಿದ್ದಾರೆ ಎಂದು ಮಾಜಿ ಸಚಿವ, ಮಂಗಳೂರು ಕ್ಷೇತ್ರ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಲವ್ ಜಿಹಾದ್ ಬಗ್ಗೆ ಸರ್ಕಾರ ಕಾನೂನು ಮಾಡಬೇಕು, ಕಾರ್ಯಕಾರಿಣಿ ಸಭೆಯಲ್ಲಿ ಲವ್ ಜಿಹಾದ್ ಕಾನೂನು ತರುತ್ತೇವೆ ಅಂತಾ ಹೇಳಿದ್ದರು ಆದರೆ, ಗ್ರಾಮ ಪಂಚಾಯತ್ ಚುನಾವಣೆ ಮುಗಿದ ತಕ್ಷಣ ಆ ಬಗ್ಗೆ ಚಕಾರ ಎತ್ತುತ್ತಿಲ್ಲ”
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ದರೋಡೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ . “ಜಿಲ್ಲೆಯಲ್ಲಿ ಅಲ್ಲಲ್ಲಿ ದರೋಡೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ರಾತ್ರಿ ಮನೆಯಲ್ಲಿ ಮಲಗಲು ಹೆದರಿಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ನೈತಿಕ ಪೆÇೀಲಿಸ್ ಗಿರಿಗೆ ಅವಕಾಶ ಮಾಡಿಕೊಡಲಾಗಿದ್ದು, ಪೆÇಲೀಸ್ ಕ್ರಮ ಕೈಗೊಂಡರೆ ಪೆÇಲೀಸರ ವಿರುದ್ಧವೇ ದೂರು ಕೊಡುತ್ತಾರೆ” ಎಂದರು.
ಇನ್ನು ಸುದ್ದಿಗೋಷ್ಠಿ ನಡೆಸಿ ಬಹಿರಂಗ ಎಚ್ಚರಿಕೆ ನೀಡುವ ಬಗ್ಗೆ ಪೆÇಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ, ಸರ್ಕಾರ ಮೊದಲು ಕಾನೂನು ತರಲಿ, ಕಾನೂನು ತರದಿದ್ದರೆ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡಲಿ” ಎಂದು ಹೇಳಿದ್ದಾರೆ.

