ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಎಸ್ ಎಸ್ ಎಫ್ ತೊಕ್ಕೊಟ್ಟು ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪಟ್ಲ ಶಾಖೆ ವತಿಯಿಂದ ರಂಝಾನ್ ಪ್ರಯುಕ್ತ ಪಟ್ಲ ಮಸೀದಿಯಲ್ಲಿ ಇಫ್ತಾರ್ ಕೂಟ ಹಾಗೂ ಜುಮಾ ಮಸೀದಿಗೆ ರೂ.55,000 ಮೊತ್ತದ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಯಿತು.
ಜಮಲುಲೈಲ್ ತಂಙಳ್ ನೀರಿನ ವ್ಯವಸ್ಥೆಗೆ ಚಾಲನೆ ನೀಡಿ ದುಆ ನೆರವೇರಿಸಿದರು. ಈ ಸಂದರ್ಭ ಸೆಕ್ಟರ್ ಉಪಾಧ್ಯಕ್ಷ ಅಲ್ತಾಫ್ ಕುಂಪಲ, ಕೋಶಾಧಿಕಾರಿ ಸಮೀರ್ ಸೇವಂತಿಗುಡ್ಡೆ, ಕಾರ್ಯದರ್ಶಿ ಜುನೈದ್ ಪಟ್ಲ, ಶಾಖಾ ಅಧ್ಯಕ್ಷ ಶಫೀಕ್ ಅಹ್ಸನಿ, ಪಟ್ಲ ಖತೀಬ್ ಎಂ.ಸಿ.ಮಹಮ್ಮದ್ ಫೈಝಿ ಉಪಸ್ಥಿತರಿದ್ದರು




