UN NETWORKS
ಕೊಣಾಜೆ: ಸಂಘ ಸಂಸ್ಥೆಗಳು ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಕಾರ್ಯ ಪ್ರವೃತ್ತವಾದರೆ ಉತ್ತಮ ಮಾದರಿ ಸಮಾಜ ನಿರ್ಮಾಣ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.

ಅವರು ದೇರಳಕಟ್ಟೆಯ ನಿಟ್ಟೆ ವಿದ್ಯಾ ಸಂಸ್ಥೆಯ ಸೆಮಿನಾರ್ ಹಾಲ್ ನಲ್ಲಿ ಭಾನುವಾರ ನಡೆದ ರೋಟರಿ ಕ್ಲಬ್ ದೇರಳಕಟ್ಟೆ ಇದರ ನೂತನ ಪದಾಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ದೇರಳಕಟ್ಟೆಯ ರೋಟರಿ ಕ್ಲಬ್ ಕಳೆದ ಹಲವು ವರ್ಷದಿಂದ ಉತ್ತಮ ಕಾರ್ಯದೊಂದಿಗೆ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯದೊಂದಿಗೆ ಮುನ್ನಡೆಯಲಿ ಎಂದು ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕನ್ಸೂಮರ್ ಕನ್ಸಲ್ಟೆಂಟ್ ಚಂದ್ರಶೇಖರ್ ಪಿ.ಎಸ್ ಅವರು, ದೇರಳಕಟ್ಟೆ ರೋಟರಿ ಕ್ಲಬ್ನ ಹಿಂದಿನ ಅವಯ ಅಧ್ಯಕ್ಷರುಗಳ ಅವಧಿಯಲ್ಲಿಯೂ ಕ್ಲಬ್ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದೆ. ಹಾಗೆಯೇ ಇದೀಗ ಕ್ಲಬ್ ಗೆ ಪ್ರೊ. ರವಿಶಂಕರ್ ರಾವ್ ಅವರ ಸಾರಥ್ಯ ದೊರೆತ್ತಿದ್ದು ಅವರ ಅವಧಿಯಲ್ಲಿ ಸಂಸ್ಥೆಯು ಇನ್ನಷ್ಟು ಬೆಳೆಯಲಿ ಎಂದರು. ರೋಟರಿಕ್ಲಬ್ನ ಜಿಲ್ಲಾ ಮಾಜಿ ಗವರ್ನರ್ ಡಾ. ದೇವದಾಸ್ ರೈ ನೂತನ ಪದಾಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ನೂತನ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಅವರನ್ನು ಕ್ಲಬ್ನ ಗೌರವ ಸದಸ್ಯರಾಗಿ ಸೇರ್ಪಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಝೋನ್ 3ರ ಸಹಾಯಕ ಗವರ್ನರ್ ಸುಮಿತ್ ಎಸ್ ರಾವ್, ರೋಟರಿ ಕ್ಲಬ್ನ ನೂತನ ಅಧ್ಯಕ್ಷ ಪ್ರೊ. ರವಿಶಂಕರ್ ರಾವ್, ಕಾರ್ಯದರ್ಶಿ ವಿಕ್ರಮದತ್ತ, ಕಳೆದ ಅವಯ ಅಧ್ಯಕ್ಷ ಪುರುಷೋತ್ತಮ ಅಂಚನ್, ಕಾರ್ಯದರ್ಶಿ ಜೆ.ಪಿ. ರೈ ಹಾಗೂ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸೇರಿದಂತೆ ನೂತನ ಪದಾಕಾರಿಗಳು ಉಪಸ್ಥಿತರಿದ್ದರು.


