ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು :ರಕ್ತದಾನ ಶಿಬಿರ ಉತ್ತಮವಾದ ದಾನವಾಗಿದ್ದು, ಇದಕ್ಕೆ ಇಸ್ಲಾಂ ಮಹತ್ತರವಾದ ಸ್ಥಾನ ಕಲ್ಪಿಸಿದೆ. ರೋಗಿಗಳ ರಕ್ಷಣೆಗಾಗಿ ಉಚಿತ ರಕ್ತದಾನ ಮಾಡಿ ಸಹಕರಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ಎಸ್‍ಎಸ್‍ಎಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಉಮ್ಮರ್ ಅಹ್ಸನಿ ಹೇಳಿದರು.
ಅವರು ಎಸ್‍ಎಸ್‍ಎಫ್ ಉಳ್ಳಾಲ ಡಿವಿಷನ್ ಮತ್ತು ಕೆಎಂಸಿ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಎಸ್‍ಎಸ್‍ಎಫ್ ತಲಪಾಡಿ, ಉಳ್ಳಾಲ, ತೊಕ್ಕೊಟ್ಟು ಸೆಕ್ಟರ್ ಇದರ ಸಹಯೋಗದೊಂದಿಗೆ ಭಾನುವಾರ ತೊಕ್ಕೊಟ್ಟುವಿನಲ್ಲಿ ನಡೆದ ಉಚಿತ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಸಿಎಫ್ ಸದಸ್ಯ ಮಹಮಗಮದ್ ರಫೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉಳ್ಳಾಲ ನಗರ ಸಭೆ ಕೌನ್ಸಿಲ್ರ್ ಉಸ್ಮಾನ್ ಕಲ್ಲಾಪು, ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ,ಎಸ್.ಎ. ಹಕೀಂ ಮದನಿ, ಶಕೀಲ್ ತುಂಬೆಜ, ಫಾರೂಕ್ ಸಖಾಫಿ, ಇಲ್ಯಾಸ್ ಸಖಾಫಿ, ಸೆಯ್ಯದ್ ಖುಬೈಬ್ ತಂಙಳ್, ಡಾ. ಅಕ್ಷಯ್, ಭವಾನಿಶಂಕರ್, ಎಸ್‍ಎಸ್‍ಎಫ್ ತೊಕ್ಕೊಟು ಸೆಕ್ಟರ್ ರಿಲೀಫ್ ಸರ್ವಿಸ್ ಅಧ್ಯಕ್ಷ ಅಲ್ತಾಫ್ ಕುಂಪಲ, ಸಮೀರ್ ಸೇವಂತಿಗುಡ್ಡೆ, ಮುಸ್ತಫಾ ಝುಹ್‍ರಿ ಮೊದಲಾದವರು ಉಪಸ್ಥಿತರಿದ್ದರು.




